ಬೈಲೂರು : ನಚಿಕೇತ ವಿದ್ಯಾಲಯ ಬೈಲೂರು ಸಂಸ್ಥೆಯ ವಿದ್ಯಾರ್ಥಿಗಳ ಮಾತೆಯರ ‘ಮಾತೃಭಾರತಿ’ ಸಭೆ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮ ನಚಿಕೇತ ಸಭಾಂಗಣದಲ್ಲಿ ನಡೆಯಿತು.
ಆರೋಗ್ಯ ಕೇಂದ್ರದ ಸುವರ್ಣ ಅವರು ಮಾತನಾಡಿ, ಹೆತ್ತವರು ಮಕ್ಕಳನ್ನು ಬೆಳೆಸುವ ಕ್ರಮ ಬದಲಾಗಿದೆ. ಇದರಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗಿದೆ. ಜೊತೆಗೆ ಮಕ್ಕಳ ಮಾನಸಿಕ ವರ್ತನೆ ಬದಲಾಗಿದೆ.ಪೋಷಕರು ತಮ್ಮ ನಡೆ ನುಡಿಯಲ್ಲಿ, ಆಚಾರ ವಿಚಾರಗಳಲ್ಲಿ ಸಂಪ್ರದಾಯಕತ್ವವನ್ನು ಕಾಪಾಡಿಕೊಂಡು ಬರಬೇಕು ಎಂದರು.
Advertisement. Scroll to continue reading.


ಅಧ್ಯಕ್ಷತೆಯನ್ನು ನಚಿಕೇತ ಮಾತೃಭಾರತಿಯ ಅಧ್ಯಕ್ಷೆ ದೀಕ್ಷಿತಾ ರಾವ್ ವಹಿಸಿದರು.
ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಮಯ್ಯ ಉಪಸ್ಥಿತರಿದ್ದರು. ಮಾತೃಭಾರತಿಯ
ಕಾರ್ಯದರ್ಶಿ ಸ್ನೇಹಲತಾ ಹಾಗೂ ಶಾಲಿನಿ ಪ್ರಾರ್ಥನೆ ಯನ್ನು ನೆರವೇರಿಸಿದರು. ಶಶಿರೇಖಾ ಸ್ವಾಗತಿಸಿದರು. ವಿಜಯಲಕ್ಷ್ಮಿ ವಂದಿಸಿದರು.