ಉಡುಪಿ : ಇತ್ತೀಚೆಗೆ ಬಾರಿ ಕನ್ನಡ ಚಿತ್ರರಂಗದಲ್ಲಿ ಬಾರಿ ಸದ್ದು ಮಾಡಿ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಮಾಡುತ್ತಿರುವ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಕನ್ನಡ ಚಿತ್ರದ ದೈವಾವೇಶದ ಚಿತ್ರವನ್ನು ಗೂಡು ದೀಪಕ್ಕೆ ಅಳವಡಿಸಿ ಅಂದಗಾಣಿಸಲಾಗಿದೆ. ರಾತ್ರಿ ಹೊತ್ತಿನಲ್ಲಿ ವಿದ್ಯುತ್ ದೀಪ ಅಳವಡಿಸಿದಾಗ ಬಹಳ ಸುಂದರವಾಗಿ ಕಾಣುವ ಕಾಂತಾರ ಚಿತ್ರದ ದೈವದ ಚಿತ್ರವನ್ನು ಗೂಡು ದೀಪಕ್ಕೆ ಅಳವಡಿಸಿದವರು ಸಾಮಾಜಿಕ ಕಾರ್ಯಕರ್ತ ಗಣೇಶ ರಾಜ್ ಸರಳೇಬೆಟ್ಟು, ಅವರ ಪುತ್ರ ಸಮರ್ಥ್ ರಾಜ್ ಅವರು ಜೊತೆಗೂಡಿ ಸಹಕರಿಸಿದ್ದಾರೆ. ಗೂಡುದೀಪವನ್ನು ರಚನೆ ಮಾಡಲು ಎರಡು ದಿನತಗಲಿದೆ.
ಇದನ್ನು ಬನ್ನಂಜೆಯಲ್ಲಿ ನಡೆಯುವಗೂಡು ದೀಪ ಸ್ಪರ್ಧೆಯಲ್ಲಿ ಬಳಸಲಾಗುವುದೆಂದು ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.
Advertisement. Scroll to continue reading.

In this article:Diksoochi news, diksoochi Tv, diksoochi udupi, kanthara, rishabh shetty, ಗೂಡುದೀಪ

Click to comment