ಪಡುಬಿದ್ರೆ : ಉಡುಪಿ ಜಿಲ್ಲೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಶ್ರೀ ಆದಿಶಕ್ತಿ ಆದಿ ಮಾಯೆ ಅಣ್ಣಪ್ಪ ಪಂಜುರ್ಲಿ ಮಂತ್ರ ದೇವತೆ ಹಾಗೂ ಸ್ವಾಮಿ ಕೊರಗಜ್ಜ ಸನ್ನಿಧಿ ಪಡುಬಿದ್ರಿಯಲ್ಲಿ ಕ್ಷೇತ್ರದ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರ ಹಾಗೂ ನೀಲ ನಕ್ಷೆ ಬಿಡುಗಡೆ ಕಾರ್ಯಕ್ರಮ ಹಾಗೂ ಕೊರಗಜ್ಜನ ಸರಿಯಾಗಿ ಕೋಲ ಜರಗಿತು.
ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಗುರುಪುರ ಸ್ವಾಮೀಜಿಯವರು ದೀಪ ಬೆಳಗಿಸುವುದರ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಕಾರ್ಯಕ್ರಮದ ಪ್ರಮುಖ ಅಂಶವಾದ ಸುಮಾರು ಒಂದು ಕೋಟಿ 30 ಲಕ್ಷ ವೆಚ್ಚದ ಕ್ಷೇತ್ರ ನೀಲ ನಕ್ಷೆ ಹಾಗೂ ವಿಜ್ಞಾಪನ ಪತ್ರವನ್ನು ಸ್ವಾಮೀಜಿಯವರು ಗೌರವ ಅತಿಥಿಗಳ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಿದರು.
ಸ್ವಾಮೀಜಿಯವ ಆಶೀರ್ವಾಚನದಲ್ಲಿ ಗೋದಾದ್ವಾದಶಿಯ ಶುಭದಿನದ ಈ ವಿಜ್ಞಾಪನ ಪತ್ರದ ಬಿಡುಗಡೆಯ ಕಾರ್ಯಕ್ರಮ ಒಳ್ಳೆಯ ಸುಹುಮೂರ್ತದಲ್ಲಿ ಪ್ರಾರಂಭವಾದದ್ದು ಜೀರ್ಣೋದ್ದಾರ ಶುಭ ಸಂದೇಶ. ಈ ಜೀರ್ಣೋದ್ದಾರವು ಈ ಸ್ಥಳದ ದೈವದೇವರುಗಳ ಸಂಕಲ್ಪವೇ ಹೊರತು ನಾವು ಮಾಡುತ್ತೆವೆ ಎಂಬುವುದು ಕೇವಲ ನಿಮಿತ್ತ ಮಾತ್ರ. ಈ ಕ್ಷೇತ್ರದ ಜೀರ್ಣೋದ್ದಾರದ ಸುಮಾರು 1.30 ಕೋಟಿ ರೂಪಾಯಿ ನೀಲಿನಕಾಶೆಯು ಇವತ್ತು ಬಿಡುಗಡೆಯಯಿತು. ಈ ಪುಣ್ಯ ಕಾರ್ಯಕ್ಕೆ ಇದಕ್ಕಿಂತಲೂ ಅಧಿಕ ಹಣಕಾಸಿನ ಹೊಳೆಯು ಹರಿದು ಬಂದು ಪೂರ್ಣವಾಗಲಿ ಎಂದು ಆಶೀರ್ವಚನ ಮಾಡಿದರು.


ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿಯವರು ಮಾತನಾಡಿ, ಗೋಪೂಜೆಯ ಈ ಶುಭಸಮಯದಲ್ಲಿ ಈ ವಿಜ್ಞಾಪನ ಪತ್ರ ಬಿಡುಗಡೆ ಶುಭ ಸಂಕೇತ. ಹಿರಿಯರು ಮತ್ತು ಸಮಿತಿಯವರು ನನ್ನ ಮನೆಗೆ ಬಂದು ನಾನು ಗೌರವಾಧ್ಯಕ್ಷ ಆಗಬೇಕೆಂದು ವಿನಂತಿಸಲು ಬಂದಾಗ ನಾನು ನನ್ನ ಗೋಶಾಲೆಯಲ್ಲಿ ಇದ್ದೆ ಮತ್ತು ಸಂತೋಷದಿಂದ ಒಪ್ಪಿಕೊಂಡಿರುತೇನೆ. ಈ ಪುಣ್ಯ ಕಾರ್ಯವು ಒಳ್ಳೆಯ ರೀತಿಯಲ್ಲಿ ಆಗಲಿ ಇದಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಹಾಗೂ ಗೌರವ ಅತಿಥಿಗಳು ಶುಭ ಹಾರೈಸಿದರು.
ಈ ಒಂದು ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ
ನಿತಿನ್ ಪೂಜಾರಿ, ಶೇಖರ್ ಶೆಟ್ಟಿ ಬಗ್ಗೆಡಿ ಗುತ್ತು, ರಮೇಶ್ ಕಾಂಚನ್ ಹಿರಿಯಡ್ಕ, ರವಿ ಶೆಟ್ಟಿ, ಪಡುಬಿದ್ರಿ ಪಂಚಾಯತ್ ಅಧ್ಯಕ್ಷ ಶ್ರೀಕರ್ ಶೆಟ್ಟಿ ಕಾಪು, ದಿನೇಶ್ ಶೆಟ್ಟಿ ಕಲ್ಯ, ಕಾಪು ಶಾಮಲಾ ಕುಂದರ್, ನೀತಾ ಪ್ರಭು, ಮಮತ ಪಿ ಶೆಟ್ಟಿ ವಿನೋದ್ ಶೆಟ್ಟಿ,ಕಿಶೋರ್ ಶೆಟ್ಟಿ ದೆಪ್ಪುನಿ ಗುತ್ತು, ಕುಮಾರ ಪಂಬದ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರೂಪಣೆ ಸಾಂಸ್ಕೃತಿಕ ಕಾರ್ಯದರ್ಶಿಯಾದ ಕಮಲಾಕ್ಷ ಗಂಧ ಕಾಡು ಸ್ವಾತಿ ಆಚಾರ್ಯ ಮತ್ತು ಕಾರ್ಯಕ್ರಮ ಸಂಯೋಜನೆ ಸಾಂಸ್ಕೃತಿಕ ಕಾರ್ಯದರ್ಶಿ ಪ್ರೀತಿ ಕಲ್ಯಾಣಪುರ್ ಕಾರ್ಯಕ್ರಮ ನೆರೆವೇರಿಸಿದರು.
ನಂತರ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾನಂದ ಸಾಲ್ಯಾನ್ ಕೇರ್ವಾಶೆ ಪ್ರಾಸ್ತಾವಿಕ ಮಾತನಾಡಿದರು.
ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷ ಪ್ರಕಾಶ್ ಶೆಟ್ಟಿ ಪಡುಹಿತ್ಲು ಸ್ವಾಗತಿಸಿದರು.

