ಶಂಕರನಾರಾಯಣ : ವ್ಯಕ್ತಿಯೊಬ್ಬರು ಸಿದ್ದಾಪುರ ಗ್ರಾಮದ ಸಿದ್ದಾಪುರ ಮಾರ್ಕೇಟ್ನ ಒಳಗಡೆ ಮಾರ್ಕೆಟ್ನ ಕಟ್ಟಡದ ಪಕ್ಕಾಸಿಗೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಡಾಮಕ್ಕಿ ಮೂರುಕೈ ನಿವಾಸಿ ರಾಜೀವ ಹೆಗ್ಡೆ(66) ಆತ್ಮಹತ್ಯೆ ಮಾಡಿಕೊಂಡವರು.
ಇವರು ವಿಪರೀತ ಮದ್ಯ ಸೇವನೆ ಮಾಡುವ ಚಟ ಹೊಂದಿದ್ದು, ಅಲ್ಲದೆ 26 ವರ್ಷದಿಂದ ಮನೆ ಬಿಟ್ಟು ಯಾವುದೇ ಒಂದೆ ಕಡೆ ವಾಸವಿರದೇ ಬೇರೆ ಬೇರೆ ಕಡೆ ತಿರುಗಾಡಿಕೊಂಡಿದ್ದರು ಎನ್ನಲಾಗಿದೆ.
Advertisement. Scroll to continue reading.

ಇದೇ ವಿಷಯಗಳಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಅ.28 ರಿಂದ 9 ಗಂಟೆಯಿಂದ ಅ.29 ರ ಬೆಳಿಗ್ಗೆ 6 ಗಂಟೆಯ ಮದ್ಯದ ಅವಧಿಯಲ್ಲಿ ಸಿದ್ದಾಪುರ ಗ್ರಾಮದ ಸಿದ್ದಾಪುರ ಮಾರ್ಕೇಟ್ನ ಒಳಗಡೆ ಮಾರ್ಕೆಟ್ನ ಕಟ್ಟಡದ ಪಕ್ಕಾಸಿಗೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
In this article:Diksoochi news, diksoochi Tv, diksoochi udupi, Kundapura, siddapura, Sucide

Click to comment