ತಿರುವನಂತಪುರಂ: ಚಕ್ಕುಲಿ ಗಂಟಲಲ್ಲಿ ಸಿಲುಕಿ ಒಂದೂವರೆ ವರ್ಷದ ಪುಟ್ಟ ಕಂದ ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ.
ಮೃತ ಬಾಲಕನನ್ನು ವೈಷ್ಣವ್ ಎಂದು ಗುರುತಿಸಲಾಗಿದೆ.
ವೈಷ್ಣವ್ ಮಂಕಂಕುಜಿ ಮಲಯಿಲ್ ಪಾಡೆತತ್ತಿಲ್ ಹೌಸ್‍ನ ವಿಜೀಶ್ ಮತ್ತು ದಿವ್ಯಾ ದಾಸ್ ಅವರ ಅವಳಿ ಮಕ್ಕಳಲ್ಲಿ ಒಬ್ಬ.
ಘಟನೆ ನಡೆದ ಸಂದರ್ಭದಲ್ಲಿ ಮಗು ಹಾಗೂ ಆತನ ತಾಯಿ ದಿವ್ಯಾ ಮಾತ್ರ ಮನೆಯಲ್ಲಿದ್ದರು.
ಮಗು ಚಕ್ಕುಲಿಯನು ತಿಂದುಕೊಂಡು ತನ್ನ ಪಾಡಿಗೆ ಆಟವಾಡುತ್ತಿದ್ದನು. ಈ ವೇಳೆ ಏಕಾಏಕಿ ಚಕ್ಕುಲಿಯನ್ನು ನುಂಗಿಬಿಟ್ಟಿದ್ದಾನೆ. ಪರಿಣಾಮ ಚಕ್ಕುಲಿ ಗಂಟಲಲ್ಲಿ ಸಿಲುಕಿಕೊಂಡು ಆತನಿಗೆ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ಕೂಡಲೇ ಆತನನ್ನು ಕೊಲ್ಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ವೈಷ್ಣವ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.
Advertisement. Scroll to continue reading.
In this article:chakkuli, child death, death, Diksoochi news, kerala, murukku, thiruvananthapuram
Click to comment