ಬೆಂಗಳೂರು : ನಗರದಲ್ಲಿ ರಸ್ತೆ ಗುಂಡಿಗಳಿಂದ ಆಗುತ್ತಿರುವ ಅವಾಂತರ ಮತ್ತೆ ಮುಂದುವರಿದಿದೆ. ಮತ್ತೊಬ್ಬ ವ್ಯಕ್ತಿ ರಸ್ತೆ ಗುಂಡಿಗೆ ಬಿದ್ದು ಕೋಮಾಗೆ ಜಾರಿದ್ದಾರೆ.
ನಗರದ ಜಾಲಹಳ್ಳಿಯ ಗಂಗಮ್ಮ ರಸ್ತೆಯಲ್ಲಿ ಘಟನೆ ನಡೆದಿದೆ. ವಿದ್ಯಾರಣ್ಯಪುರದ ಸಂದೀಪ್ ಎಂಬವರು ರಸ್ತೆ ಗುಂಡಿಗೆ ಬಿದ್ದಿದ್ದಾರೆ. ಗುಂಡಿಗೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ರಾತ್ರಿ 9.30ಕ್ಕೆ ಸ್ನೇಹಿತರ ಜೊತೆ ಕ್ರಿಕೆಟ್ ಆಟ ಮುಗಿಸಿ ಮನೆಗೆ ತೆರುಳಿತ್ತಿದ್ದ ವೇಳೆ ಸಂದೀಪ್ ರಸ್ತೆಯಲ್ಲಿ ಗುಂಡಿ ಕಾಣಿಸಿದೆ ಬಿದ್ದಿದ್ದಾರೆ. ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ತೀವ್ರವಾಗಿ ಗಾಯವಾದ ಪರಿಣಾಮ ಸಂದೀಪ್ ಗೆ ಆರೇಷನ್ ಮಾಡಲಾಗಿದೆ. ಸದ್ಯ ಅವರು ಕೋಮಾದಲ್ಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
Advertisement. Scroll to continue reading.
