ಬ್ರಹ್ಮಾವರ : ನಿರ್ಮಲ ಪ್ರೌಢ ಶಾಲೆ ಬ್ರಹ್ಮಾವರ ಇದರ ವಜ್ರ ಮಹೋತ್ಸವ ಅಂಗವಾಗಿ ಭಾನುವಾರ ಪೂರ್ವಭಾವಿ ಸಭೆ ಭಾನುವಾರ ಶಾಲಾ ಆವರಣದಲ್ಲಿ ಜರುಗಿತು.
ವಜ್ರ ಮಹೋತ್ಸವ ಸಮಿತಿಯ ವಿಶ್ವನಾಥ್ ಶೆಟ್ಟಿ ಮಟಪಾಡಿ ಅಧ್ಯಕ್ಷತೆ ವಹಿಸಿದ್ದರು.
ಅವರು ಈ ಸಂದರ್ಭ ಮಾತನಾಡಿ, ಜನವರಿ ಪ್ರಥಮ ವಾರದಲ್ಲಿ ಜರುಗುವ ಕಾರ್ಯಕ್ರಮಕ್ಕೆ ಹಳೆ ವಿದ್ಯಾರ್ಥಿಗಳು , ವಿದ್ಯಾರ್ಥಿಗಳ ಪೋಷಕರು , ಮತ್ತು ದಾನಿಗಳ ನೆರವಿನಿಂದ ಅನೇಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕೂಡಾ ಈ ಸಂದರ್ಬ ಜರುಗಲಿದೆ ಎಂದರು.
ಶಾಲಾ ಮುಖ್ಯೋಪಧ್ಯಾಯಿನಿ ಜೆಸಿಂತ ಕಾರ್ಡೋಜಾ , ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಬಿ. ಎಸ್. ಭಟ್, ವಜ್ರ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಜೋಯಲ್ ಉಪಸ್ಥಿತರಿದ್ದರು.
ಅನೇಕ ಹಳೆ ವಿದ್ಯಾರ್ಥಿಗಳು, ಸಮಿತಿಯ ಸದಸ್ಯರು , ಪೋಷಕರು ಉಪಸ್ಥಿತರಿದ್ದರು.
ಶಿಕ್ಷಕ ನಾಗರಾಜ ಅಲ್ತಾರ್ ಸ್ವಾಗತಿಸಿ , ರೇಷ್ಮಾ ವಂದಿಸಿದರು.
In this article:brahmavara, nirmala highschool, ದಿಕ್ಸೂಚಿ, ದಿಕ್ಸೂಚಿ ನ್ಯೂಸ್, ಬ್ರಹ್ಮಾವರ ನಿರ್ಮಲ ಸ್ಕೂಲ್

Click to comment