ಉಡುಪಿ : ಪುರಾಣ ಪ್ರಸಿದ್ಧ ಪಣಿಯಾಡಿ ಶೇಷಾಸನ ಲಕ್ಷ್ಮೀ ಅನಂತ ಪದ್ಮನಾಭ ದೇವಳ ಭಾನುವಾರ ಮುರಳಿ ಕೃಷ್ಣ ತಂತ್ರಿಯವರ ಪ್ರಾಯೋಜಕತ್ವದಲ್ಲಿ ವಿಷ್ಣು ಸಹಸ್ರ ನಾಮಾವಳಿ ಸಹಿತ ಲಕ್ಷ ತುಳಸಿ ಅರ್ಚನೆ ಸಂಪನ್ನಗೊಂಡಿತು.
ಮಧ್ಯಾಹ್ನ ಅನ್ನ ಸಂತರ್ಪಣೆಯ ಬಳಿಕ ಸಂಜೆ ಶ್ರೀ ಪುತ್ತಿಗೆ ಮಠದ ವತಿಯಿಂದ ವಿಶೇಷ ದೀಪೋತ್ಸವಾದಿ ಸೇವೆಗಳು ನಡೆದವು.
ಈ ಸಂದರ್ಭದಲ್ಲಿ ತುಳಸೀ ಸಂಕೀರ್ತನೆ, ಭಜನೆ, ಅನಂತ ದೀಪಗಳ ರಾತ್ರಿ ದೀಪೋತ್ಸವದ ಜೊತೆ ರಂಗಪೂಜೆ, ಅಷ್ಟಾವಧಾನ, ಪಲ್ಲಕ್ಕಿಉತ್ಸವ ಸೇವೆ, ಉತ್ಸವ ಬಲಿ, ಸಿಡಿಮದ್ದು ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳು ನಡೆದವು.
ಋತ್ವಿಜ ವಾದಿರಾಜ ತಂತ್ರಿ ಹಾಗೂ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಅವರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದವು. ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
In this article:diksoochi Tv, diksoochi udupi, paniyadi, ದಿಕ್ಸೂಚಿ, ಪಣಿಯಾಡಿ ಲಕ್ಷ್ಮಿ ಅನಂತಪದ್ಮನಾಭ ದೇವಸ್ಥಾನ

Click to comment