ಜಮ್ಮು ಮತ್ತು ಕಾಶ್ಮೀರ : ಆಳವಾದ ಕಂದಕಕ್ಕೆ ಟಾಟಾ ಸುಮೋವೊಂದು ಬಿದ್ದು, ಮಹಿಳೆಯರು ಸೇರಿ 8 ಮಂದಿ ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಕಿಶ್ತ್ವಾರ್ ಜಿಲ್ಲೆಯ ಮಾರ್ವಾಹ್ ಪ್ರದೇಶದಲ್ಲಿ ನಡೆದಿದೆ.
ಏಳು ಮೃತರನ್ನು ಗುರುತಿಸಲಾಗಿದ್ದು, ಮಹಿಳೆಯೊಬ್ಬರ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಮೃತರನ್ನು ಚಾಲಕ ಉಮರ್ ಗನಿ, ಮೊಹಮ್ಮದ್ ಅಮೀನ್, ಮೊಹಮ್ಮದ್ ಇರ್ಫಾನ್, ಅಫಕ್ ಅಹ್ಮದ್, ಸಫೂರ ಬಾನೋ, ಮುಜಾಮಿಲಾ ಬಾನೋ, ಆಸಿಯಾ ಬಾನೋ ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ 6 ಗಂಟೆಗೆ ಅಲಸ್ಯಾರ್ ರಸ್ತೆಯಲ್ಲಿ ಮಾರ್ವಾಹ್ ಪ್ರದೇಶದಲ್ಲಿ ಆಳವಾದ ಕಮರಿಗೆ ಟಾಟಾ ಸುಮೋವೊಂದು ಬಿದ್ದಿದೆ. ಪರಿಣಾಮ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
Advertisement. Scroll to continue reading.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಅಗತ್ಯವಿರುವ ಎಲ್ಲ ನೆರವು ನೀಡುವಂತೆ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
In this article:diksoochi udupi, Diksoochinews, marvah, ಜಮ್ಮು ಕಾಶ್ಮೀರ, ದಿಕ್ಸೂಚಿ ನ್ಯೂಸ್

Click to comment