ಒಡಿಶಾ : ಗೂಡ್ಸ್ ರೈಲು ಹಳಿತಪ್ಪಿ, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ, ಕೆಲವರ ಸ್ಥಿತಿ ಗಂಭೀರವಾಗಿರುವ ಘಟನೆ ಜಾಜ್‌ಪುರ ಜಿಲ್ಲೆಯ ಕೊರೇ ರೈಲು ನಿಲ್ದಾಣದಲ್ಲಿ ನಡೆದಿದೆ.
ಇಂದು ಬೆಳಗ್ಗೆ 6.45ರ ಸುಮಾರಿಗೆ ಕೆಲವರು ಪ್ಯಾಸೆಂಜರ್ ರೈಲಿಗಾಗಿ ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ.
ಡೊಂಗೋಆಪೋಸಿಯಿಂದ ಛತ್ರಪುರಕ್ಕೆ ತೆರಳುತ್ತಿದ್ದ ಗೂಡ್ಸ್ ರೈಲು ಹಳಿತಪ್ಪಿ 8 ವ್ಯಾಗನ್‌ಗಳು ಪ್ಲಾಟ್‌ಫಾರ್ಮ್ ಮತ್ತು ವೇಟಿಂಗ್ ಹಾಲ್‌ಗೆ ಅಪ್ಪಳಿಸಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎನ್ನಲಾಗುತ್ತಿದೆ. ಘಟನೆಯಲ್ಲಿ ನಿಲ್ದಾಣದ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement. Scroll to continue reading.

ರೈಲು ಹಳಿ ತಪ್ಪಲು ಕಾರಣ ತಿಳಿದು ಬಂದಿಲ್ಲ.