Connect with us

Hi, what are you looking for?

ಕರಾವಳಿ

ಕೂಳೂರು ಮೈದಾನದ ಬಳಿ ಮೃತದೇಹದ ಅವಶೇಷಗಳು ಪತ್ತೆ; ಹಣಕ್ಕಾಗಿ ಹಣತೆ ವ್ಯಾಪಾರಿ ಹತ್ಯೆ; ಸಿಕ್ಕಿದ್ದು 30.ರೂ!

2

ಮಂಗಳೂರು : ಹಣತೆ ವ್ಯಾಪಾರಕ್ಕಾಗಿ ಮಂಗಳೂರಿಗೆ ಬಂದಿದ್ದ ತಮಿಳುನಾಡಿನ ಸೇಲಂನ ಮಾಯವೇಳ್ ಪೆರಿಯಸಾಮಿ(52) ಅವರನ್ನು ಹತ್ಯೆ ಮಾಡಲಾಗಿದೆ. ಹೂವಿನ ಹಡಗಲಿ ನಿವಾಸಿ 42 ವರ್ಷದ ರವಿ ಯಾನೆ ವಕೀಲ್ ನಾಯ್ಕ್ ಬಂಧಿತ ಆರೋಪಿ.

ಕೂಳೂರು ಮೈದಾನದಲ್ಲಿ ಕೊಲೆಗೀಡಾದ ಮಾಯವೇಳ್ ಪೆರಿಯಸಾಮಿ ಮೃತದೇಹದ ಅವಶೇಷಗಳಾದ ತಲೆ ಬುರುಡೆ, ಮೂಳೆ ಇತ್ಯಾದಿಗಳು ಪತ್ತೆಯಾಗಿವೆ.

ಏನಿದು ಪ್ರಕರಣ? :

Advertisement. Scroll to continue reading.

ಪತ್ನಿಯೊಂದಿಗೆ ಮಾಯಾವೇಳ್ ಪೆರಿಯಸಾಮಿ ಅಕ್ಟೋಬರ್ 14 ರಂದು ಮಂಗಳೂರಿಗೆ ಬಂದಿದ್ದರು. ಕುದ್ರೋಳಿಯ ಅಳಕೆ ಮಾರ್ಕೆಟ್ ಬಳಿ ಮಣ್ಣಿನ ಹಣತೆಗಳನ್ನು ಮಾರಾಟ ಮಾಡಿಕೊಂಡಿದ್ದರು.

ಆರೋಪಿ ರವಿ ಯಾನೆ ವಕೀಲ್ ನಾಯ್ಕ್ ಮಂಗಳೂರಿನ ಭವಂತಿ ಸ್ಟ್ರೀಟ್‌ನಲ್ಲಿ ಬೀದಿ ಬದಿ ತರಕಾರಿ ಮಾರಾಟ ಮಾಡುತ್ತಿದ್ದ, ಹಾಗೆಯೇ ದೀಪಾವಳಿ ಸಮಯದಲ್ಲಿ ಹಣತೆಯನ್ನೂ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಅಲ್ಲದೇ ಆತ ಹಣತೆಯನ್ನು ಮಾಯಾವೇಳ್ ಪೆರಿಯಸಾಮಿ ಬಳಿಯೇ ಖರೀದಿಸುತ್ತಿದ್ದ ಎಂದು ತಿಳಿದುಬಂದಿದೆ.

ಮಾಯಾವೇಳ್ ಪೆರಿಯಸಾಮಿ ಹಣತೆಯ ರಖಂ ವ್ಯಾಪಾರಿಯಾಗಿದ್ದು, ಅವರ ಬಳಿ ಸಾಕಷ್ಟು ಹಣವಿರ ಬಹುದು ಎಂದು ಆರೋಪಿ ಭಾವಿಸಿ, ಹಣದಾಸೆಗಾಗಿ‌ ದುಷ್ಕೃತ್ಯ ಎಸಗಲು ಮುಂದಾಗಿದ್ದ.

ಸಿಕ್ಕಿದ್ದು 30 ರೂ.!

ಹಣದಾಸೆಯಿಂದ ರವಿ ವೈನ್ ಶಾಪ್‌ವೊಂದರಲ್ಲಿ‌ ಮದ್ಯ ಸೇವಿಸಿ 200 ಹಣತೆ ಬೇಕು ಎಂದು ಪೆರಿಯಸಾಮಿಯನ್ನು ನಂಬಿಸಿ ಕೂಳೂರಿನ ಮೈದಾನಕ್ಕೆ ಕರೆದುಕೊಂಡು ಹೋಗಿದ್ದ.

Advertisement. Scroll to continue reading.

ಪೆರಿಯಸಾಮಿಗೂ ಮದ್ಯಪಾನ ಮಾಡಿಸಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ಆದರೆ, ಆತನಿಗೆ ಪೆರಿಯಸಾಮಿಯ ಬಳಿ ಸಿಕ್ಕಿದ್ದು, ಕೇವಲ 30 ರೂ. ಮಾತ್ರ.

ಮಾಯವೇಳ್ ಪೆರಿಯಸಾಮಿ ನಾಪತ್ತೆಯಾಗಿರುವ ಬಗ್ಗೆ ಆತನ ಪತ್ನಿ ಬಂದರು ಪೊಲೀಸ್ ಠಾಣೆಗೆ ದೂರು‌ ನೀಡಿದ್ದರು. ರವಿವಾರ ಕೂಳೂರಿನ ಮೈದಾನದ ಬಳಿ ಮಾನವನ ಬುರುಡೆ, ಮೂಳೆ ಇತ್ಯಾದಿ ಪತ್ತೆಯಾಗಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ, ಅದು ಪೆರಿಯಸಾಮಿಯದೆಂಬುದು ತನಿಖೆ ವೇಳೆ ದೃಢಪಟ್ಟಿದೆ.

ಬಂದರು ಠಾಣೆಯ ಇನ್ಸ್‌ಪೆಕ್ಟರ್ ರಾಘವೇಂದ್ರ ನೇತೃತ್ವದ ತಂಡವು ಆರೋಪಿ ರವಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!