Connect with us

Hi, what are you looking for?

ರಾಜ್ಯ

ಕೊಲ್ಲೂರು ಕೊಡಚಾದ್ರಿಗೆ ಕೇಬಲ್ ಕಾರ್ ಅನುಮೋದನೆ; ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಅಭಿನಂದನೆ : ಸಂಸದ ಬಿ.ವೈ.ರಾಘವೇಂದ್ರ

2

ವರದಿ : ದಿನೇಶ್ ರಾಯಪ್ಪನಮಠ

ಶಿವಮೊಗ್ಗ : ದಕ್ಷಿಣ ಭಾರತದ ಪಶ್ಚಿಮಘಟ್ಟದಲ್ಲಿ ಸಮುದ್ರಮಟ್ಟದಿಂದ 1343 ಮೀಟರ್ ಎತ್ತರದ ಕೊಡಚಾದ್ರಿ ಬೆಟ್ಟವು ಶಿವಮೊಗ್ಗ ಜಿಲ್ಲೆಯಲ್ಲಿಯ ಆಧ್ಯಾತ್ಮಿಕ ಹಿನ್ನಲೆಯ ಪ್ರಮುಖ ಪ್ರವಾಸಿ ತಾಣವಾಗಿದ್ದು, ಆದಿ ಶಂಕರಾಚಾರ್ಯ ಅವರು ತಪಸ್ಸು ಮಾಡಿ ಕೊಲ್ಲೂರಿನಲ್ಲಿ ಶ್ರೀ ಮೂಕಾಂಬಿಕೆ ದೇವಸ್ಥಾನ ಪ್ರತಿಷ್ಠಾಪಿಸಿದ ಪುಣ್ಯ ಸ್ಥಳವಾಗಿರುತ್ತದೆ.

ದಕ್ಷಿಣ ಭಾರತದಿಂದ ಬರುವ ಭಕ್ತರು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ದರ್ಶನ ಮಾಡಿದ ನಂತರ ಕೊಡಚಾದ್ರಿಯ ಸರ್ವಜ್ಞಪೀಠ ದರ್ಶನ ಮಾಡಲು ಅತೀ ಕ್ಲಿಷ್ಟಕರವಾದ ರಸ್ತೆಯಲ್ಲಿ ನುರಿತ ಚಾಲಕರ ಜೀಪ್‌ನಲ್ಲಿ ಸುಮಾರು 40 ಕಿ.ಮೀ ಪ್ರಯಾಣಿಸಿ ನಂತರ 2 ಕಿ.ಮೀ ದೂರ ಅತೀ ಕಡಿದಾದ ಎತ್ತರದ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಹಾಗು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಕೊಡಚಾದ್ರಿ ಬೆಟ್ಟದ ತಪ್ಪಲಿನ ಸೌರ್ಪಣಿಕ ನದಿ ತೀರದಲಿದ್ದು ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳವಾಗಿರುತ್ತದೆ.

Advertisement. Scroll to continue reading.

ಶಿವಮೊಗ್ಗ ಕ್ಷೇತ್ರದ ಸಂಸದರಾಗಿ ಕೊಡಚಾದ್ರಿ ಹಾಗು ಕೊಲ್ಲೂರು ಕ್ಷೇತ್ರಗಳ ಪ್ರಾಮುಖ್ಯತೆ ಹಾಗು ಇಲ್ಲಿ ರಸ್ತೆ ಸಂಪರ್ಕಕ್ಕಿರುವ ಆಡಚಣೆಗಳನ್ನು ಕೇಂದ್ರ ಭೂಸಾರಿಗೆ ಸಚಿವರಿಗೆ ಮನದಟ್ಟು ಮಾಡಿಕೊಡಲು ಯಶಸ್ವಿಯಾದ ಪರಿಣಾಮ ಕೇಂದ್ರ ಭೂಸಾರಿಗೆ ಮಂತ್ರಾಲಯವು ಪರ್ವತಮಾಲಾ ಯೋಜನೆಯಡಿ ಸುಮಾರು 300 ಕೋಟಿ ವೆಚ್ಚದ ಕೇಬಲ್ ಕಾರ್ ನಿರ್ಮಾಣ ಮಾಡುವ ಯೋಜನೆಯ ಡಿ.ಪಿ.ಆರ್ ತಯಾರಿಸಲು ಅನುಮೋದನೆ ನೀಡಿ GACOR FOR NHLML (National Highway Logistics Management Limited) ಯೋಜನೆ ಅನುಷ್ಠಾನಗೊಳಿಸುವ ಜವಾಬ್ದಾರಿವಹಿಸಿ ಕೆ & ಜೆ ಕನ್ಸನ್ಸಿ ಹೊಸ ದೆಹಲಿ ಇವರಿಗೆ ಯೋಜನೆಯ ಡಿ.ಪಿ.ಆರ್ ತಯಾರಿಸಲು ಕಾರ್ಯಾದೇಶ ನೀಡಿರುತ್ತದೆ.

ಅದರಂತೆ NHLML ತಂಡ ನವೆಂಬರ್ 19 ಮತ್ತು 20 ರಂದು ಯೋಜನೆ ಪ್ರಾರಂಭದ ಮತ್ತು ಅಂತ್ಯದ ಸ್ಥಳಗಳನ್ನು ಗುರ್ತಿಸಿ ಸರ್ವೆ ಕೆಲಸ ಪೂರ್ಣಗೊಳಿಸಿದ್ದು ಸುಮಾರು 6 ಪಥ ನಕ್ಷೆಗಳನ್ನು (Alignment plan) ತಯಾರಿಸಿ ಅದರಲ್ಲಿ ಬರಬಹುದಾದ ಅಡಚಣೆಗಳನ್ನು ನಿವಾರಿಸಿ ಪಥ ನಕ್ಷೆ ಅಂತಿಮಗೊಳಿಸಲು ಸಂಬಂಧಿಸಿದ ಪ್ರವಾಸೋದ್ಯಮ, ಅರಣ್ಯವನ್ಯಜೀವಿ ವಿಭಾಗ, ಕಂದಾಯ ಹಾಗು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾನ್ಯ ಸಂಸದರ ನೆರವಿನೊಂದಿಗೆ ಸಭೆ ನಡೆಸಿ ಚರ್ಚಿಸಿದ್ದು ಡಿ.ಪಿ.ಆರ್ ತಯಾರಿಸಲು ಮುಂದಡಿಯಿಟ್ಟಿರುತ್ತಾರೆ.

NHLML ಅಧಿಕಾರಿಗಳ ತಂಡ ಮಾನ್ಯ ಸಂಸದರೊಂದಿಗೆ ಸಭೆ ನಡೆಸಿ ಕೇಬಲ್ ಕಾರ್ ನಿರ್ಮಾಣಕ್ಕೆ ಇರುವ ಸಂಭಾವ್ಯ ಅಡೆತಡೆ ಹಾಗು ಸಮಸ್ಯೆಗಳ ಬಗ್ಗೆ ವಿವರವಾಗಿ ಚರ್ಚಿಸಿ ಕೊಡಚಾದ್ರಿ ಬೆಟ್ಟದ ಸರ್ವಜ್ಞ ಪೀಠದಿಂದ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಎದುರು ಇರುವ ಗೋಶಾಲೆ ಜಾಗದ ಮತ್ತು ಇತರೆ ಜಾಗಗಳ ವಿವರಗಳನ್ನು ನೀಡಿದ್ದು ಮಾನ್ಯ ಸಂಸದರು ಸದರಿ ಯೋಜನೆಯ ಅಂತಿಮ ಪಥನಕ್ಷೆ ಹಾಗು ಡಿ.ಪಿ.ಆರ್ ಗೆ ಶೀಘ್ರ ಅನುಮೋದನೆ ಪಡೆಯಲು ಅಧಿಕಾರಿಗಳ ತಂಡಕ್ಕೆ ಸೂಚಿಸಿದ್ದು, ಅಧಿಕಾರಿಗಳ ತಂಡ 1 ತಿಂಗಳ ಅವಧಿಯೊಳಗೆ ಡಿ/ಪಿ.ಆರ್ ತಯಾರಿಸಿ ಮಂಜೂರಾತಿ ಪಡೆದು ಯೋಜನೆಯ ಅನುಷ್ಠಾನಕ್ಕೆ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿರುತ್ತಾರೆ.

ಹಾಲಿ ಇರುವ 40 ಕಿ.ಮೀ ಉದ್ದದ ರಸ್ತೆಯ ಪೈಕಿ ಸುಮಾರು 11 ಕಿ.ಮೀ ಉದ್ದದ ಕಡಿದಾದ ರಸ್ತೆಯು ಕುದುರೆಮುಕ ವನ್ಯಜೀವಿ ವಿಭಾಗದಡಿ ಬರುತ್ತಿದ್ದು ರಸ್ತೆ ಅಭಿವೃದ್ಧಿ ಅಸಾದ್ಯವಾಗಿದ್ದು ಇದರಲ್ಲಿ ಸಂಚರಿಸುವುದು ಅತೀ ಕ್ಲಿಷ್ಟಕರ ಹಾಗು ಅಪಾಯಕಾರಿಯಾಗಿರುತ್ತದೆ ಹಾಗು ಇದನ್ನು ಕ್ರಮಿಸಲು 2 ಗಂಟೆ ವ್ಯಯವಾಗುತ್ತಿರುತ್ತದೆ.

Advertisement. Scroll to continue reading.

ಇದಕ್ಕೆ ಪರಾಯವಾಗಿ 6 ಕಿ.ಮೀ ಉದ್ದದ ಕೇಬಲ್ ಕಾರ್ ಮೂಲಕ ಪ್ರತಿನಿತ್ಯ ಸಾವಿರಾರು ಭಕ್ತರು ಹಾಗು ಪ್ರವಾಸಿಗರು ಕೊಲ್ಲೂರು ದೇವಸ್ಥಾನದಿಂದ ಕೊಡಚಾದ್ರಿ ಸರ್ವಜ್ಞ ಪೀಠಕ್ಕೆ ನಿರಾಯಾಸವಾಗಿ ಕೇವಲ 20 ನಿಮಿಷದಲ್ಲಿ ಪ್ರಯಾಣಿಸಬಹುದಾಗಿದ್ದು ಇದೊಂದು ದಕ್ಷಿಣ ಭಾರತದ ಹಾಗು ಕ್ಷೇತ್ರದ ಜನತೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿರುತ್ತದೆ. ತಾವು 3 ವರ್ಷಗಳಿಂದ ಯೋಜನೆಯ ಮಂಜೂರಾತಿಗೆ ಮಾಡಿದ ಪ್ರಯತ್ನದ ಫಲವಾಗಿ ಸದರಿ ಯೋಜನೆಗೆ ಕೇಂದ್ರ ಭೂಸಾರಿಗೆ ಮಂತ್ರಾಲಯವು ಅನುಮೋದನೆ ನೀಡಿದ್ದು ಇದು ತಮಗೆ ತೀವ್ರ ಸಂತಸ ತಂದಿರುತ್ತದೆ. ಹಾಗು ಯೋಜನೆಯ ಅನುಷ್ಠಾನಕ್ಕೆ ಕ್ರಮವಹಿಸಿರುವ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಜೈರಾಂ ಗಡ್ಕರಿಯವರಿಗೆ ಈ ಭಾಗದ ಜನತೆಯ ಪರವಾಗಿ ಆಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!