ಹಾವಂಜೆ : ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆಯುವ ಪ್ರತಿ ಗ್ರಾಮದಲ್ಲೂ ಪಕ್ಷ ಸಂಘಟನಾ ಕಾರ್ಯಕ್ರಮ ಮಂಗಳವಾರ ಹಾವಂಜೆ ಗ್ರಾಮದಲ್ಲಿ ನಡೆಯಿತು.
ಕಾಂಗ್ರೆಸ್ ಮುಖಂಡ ಪಕ್ಷ ಸಂಘಟನೆಯ ನೇತೃತ್ವ ವಹಿಸಿ ಕೊಂಡಿರುವ ಯುವ ಉದ್ಯಮಿ
ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಪಕ್ಷ ಬಲವರ್ಧನೆಗೆ ತಳಮಟ್ಟದಿಂದ ಕೆಲಸ ಮಾಡಿದರೆ ಕಾಂಗ್ರೆಸ್ ಪಕ್ಷ ಗೆಲುವು ಸಾಧ್ಯ. ಆದುದರಿಂದ ತಳಮಟ್ಟದ ಕಾರ್ಯಕರ್ತರಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಈಗಿರುವ ಆಡಳಿತ ಪಕ್ಷ ಬಿಜೆಪಿ ಪಕ್ಷ ಭ್ರಷ್ಟಾಚಾರ ಮತ್ತು 40% ಕಮಿಷನ್ ಆಧಾರದಲ್ಲಿ ಕೆಲಸ ಮಾಡುತ್ತಿದೆ.
ಸ್ವಚ್ಛ ಆಡಳಿತ ನೀಡುವುದಾದರೆ. ಭ್ರಷ್ಟಾಚಾರ ರಹಿತ. ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಧ್ಯ. ಆದುದರಿಂದ ತಳಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸುವುದು. ಪಕ್ಷವನ್ನು ಬಲಪಡಿಸುದರೊಂದಿಗೆ ಆಡಳಿತಕ್ಕೆ ತರುವುದೇ ಮುಖ್ಯ ಉದ್ದೇಶ ಹೀಗಾಗಿ ಕಾರ್ಯಕರ್ತರನ್ನು ಒಗ್ಗೂಡಿಸುವ ಕಾರ್ಯಕ್ರಮ ಇದಾಗಿದೆ ಎಂದರು.

ಬ್ಲಾಕ್ ಅಧ್ಯಕ್ಷ ದಿನಕರ್ ಹೇರೂರು ಅಧ್ಯಕ್ಷತೆ ವಹಿಸಿದ್ದರು.
ಬ್ರಹ್ಮಾವರ ಬ್ಲಾಕ್ ಉಸ್ತುವಾರಿ ಉಡುಪಿ ಜಿಲ್ಲಾ ಕಾಂಗ್ರೆಸ್ನ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಹಾವಂಜೆ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿ ಹಾವಂಜೆ, ಲಲಿತ ಗುಣಕರ್, ಕಾಂಗ್ರೆಸ್ನ ಹಿರಿಯ ಮುಖಂಡ ಸ್ಥಳೀಯರಾದ ಜಯಶೆಟ್ಟಿ, ಬನ್ನಂಜೆ ಶಂಕರ ಶೆಟ್ಟಿ, ವಾಲ್ಟ್ ರ್ ಡಿಸೋಜ ಕೊಳಲಗಿರಿ, ಗಣೇಶ್ ಶೆಟ್ಟಿ ಕೀಳಂಜೆ, ರತ್ನಾಕರ ಮೊಗವೀರ ಹಾವಂಜೆ, ಪ್ರಶಾಂತ್ ಮಾಯಡಿ, ಕುಮಾರ್ ಸುವರ್ಣ, ಉಮೇಶ್ ಪೂಜಾರಿ ಉಪಸ್ಥಿತರಿದ್ದರು.
