ಬೆಂಗಳೂರು : ನಟ ವಶಿಷ್ಠ ಸಿಂಹ ಮತ್ತು ನಾಯಕಿ ನಟಿ ಹರಿಪ್ರಿಯಾ ಕೂಡ ಸದ್ಯದಲ್ಲಿಯೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು. ಕಳೆದ ವಾರ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಜೊತೆಜೊತೆಯಾಗಿ ಕೈ ಕೈ ಹಿಡಿದು ಹೋಗುತ್ತಿರುವಾಗ ಕ್ಯಾಮರಾ ಕಣ್ಣಿಗೆ ಬಿದ್ದರು. ಅವರು ದುಬೈಗೆ ಹೋಗಿ ಬಂದಿದ್ದಾರೆ ಎನ್ನಲಾಗುತ್ತಿತ್ತು.
ಇತ್ತೀಚೆಗಷ್ಟೇ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಾಗಲೂ ಮದುವೆ ವಿಚಾರ ಕೇಳಿ ಬಂದಿತ್ತು.
ನಿನ್ನೆ ನಟಿ ಹರಿಪ್ರಿಯಾ ಮನೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಎರಡೂ ಕುಟುಂಬಗಳ ಆಪ್ತರು, ಕುಟುಂಬಸ್ಥರು ಸೇರಿದ್ದರು. ಅಲ್ಲಿ ಈ ಜೋಡಿ ಉಂಗುರ ಬದಲಾಯಿಸಿಕೊಂಡಿದ್ದು. ಸದ್ಯದಲ್ಲಿಯೇ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗುತ್ತಿದೆ.

ಈ ಸುದ್ದಿ ಹೊರಬೀಳುತ್ತಿದ್ದಂತೆ ಹರಿಪ್ರಿಯಾ ನಿನ್ನೆ ಸೋಷಿಯಲ್ ಮೀಡಿಯಾದಲ್ಲೊಂದು ಪೋಸ್ಟ್ ಹಾಕಿದ್ದಾರೆ.
ಸಿಂಹದ ಚಿತ್ರ ಹಾಕಿ ಅದಕ್ಕೆ ಚಿನ್ನದ ಅಲಂಕಾರ ಮಾಡಿ ಸಿಂಹದ ತೋಳಿನಲ್ಲಿ ಚಿನ್ನಾಭರಣಗಳಿಂದ ಅಲಂಕೃತವಾದ ಮಗು ಸುಖನಿದ್ದೆ ಮಾಡುತ್ತಿರುವ ಫೋಟೋವನ್ನು ಹಾಕಿರುವ ಹರಿಪ್ರಿಯಾ ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ಹರಿಪ್ರಿಯಾ ವಶಿಷ್ಟ ‘ಸಿಂಹ’ನನ್ನು ಮದುವೆಯಾಗುತ್ತಿರುವ ಸುದ್ದಿ ನಿಜ ಎಂಬುದು ಬಯಲಾಗಿದೆ.

