ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕ್ರೀಡೆಗಳು ಮಕ್ಕಳಲ್ಲಿ ಆತ್ಮಬಲ ಹೆಚ್ಚಿಸುತ್ತದೆ.
ಶ್ರೀವಿಧ್ಯೇಶ ವಿದ್ಯಾಮಾನ್ಯ ನೇಶನಲ್ ಇಂಗ್ಲೀಷ್ ಮಿಡಿಯಂ ಸ್ಕೂಲ್ ಬಾರಕೂರು ಇದರ ವಾರ್ಷಿಕ ಕ್ರೀಡಾಕೂಟ ಮಂಗಳವಾರ ಜರುಗಿತು.
ಕಾರ್ಯಕ್ರಮವನ್ನುನ ಉದ್ಘಾಟಿಸಿದ ಬೆಂಗಳೂರು ಸಿಟಿ ಪೋಲಿಸ್ ಮತ್ತು ರಾಷ್ಟ್ರೀಯ ವಾಲಿಬಾಲ್ ಕೋಚ್ ನವೀನ್ ಶೆಟ್ಟಿ ಮಾತನಾಡಿ, ಪ್ರಾಥಮಿಕ ಶಾಲಾ ಹಂತದಲ್ಲಿ ಶಿಕ್ಷಣದ ಜೊತೆ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಸೋಲನ್ನು ಸವಾಲಾಗಿಸುವ ಕ್ರೀಡೆಯಂತೆ ಬದುಕಿನಲ್ಲಿ ದೈರ್ಯ ಮತ್ತು ಆತ್ಮ ಭಲ ಹೆಚ್ಚುತ್ತದೆ ಎಂದರು.
ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಬಾರಕೂರು ಶಾಂತಾರಾಮ ಶೆಟ್ಟಿ , ಬಿ.ಎಂ.ಸೋಮಯಾಜಿ, ಕೃಷ್ಣ ಹೆಬ್ಬಾರ್, ಮುಖ್ಯೋಪಾಧ್ಯಾಯಿನಿ ಪ್ರೀತಿರೇಖಾ, ದೈಹಿಕ ಶಿಕ್ಷಕಿ ಜ್ಯೋತಿ, ವಿದ್ಯಾರ್ಥಿ ನಾಯಕ ಸಮರ್ಥ, ಕ್ರೀಡಾ ಕಾರ್ಯದರ್ಶಿ ಆಕಾಶ್ ಉಪಸ್ಥಿತರಿದ್ದರು.
Advertisement. Scroll to continue reading.

In this article:Diksoochi news, diksoochi Tv, diksoochi udpi, shrividhyesha vidhyamana school

Click to comment