ಮಧ್ಯಪ್ರದೇಶ : ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿದ್ದ ಭಕ್ತರೊಬ್ಬರು ಸಾಯಿಬಾಬಾ ಪ್ರಾರ್ಥಿಸುತ್ತಲೇ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ವರದಿಯಾಗಿದೆ.
ಮಧ್ಯ ಪ್ರದೇಶದ ಕತ್ನಿಯಲ್ಲಿ ಸಾಯಿಬಾಬಾ ದೇಗುಲವೊಂದರಲ್ಲಿ ಪ್ರಾರ್ಥಿಸುತ್ತಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತ ವ್ಯಕ್ತಿಯನ್ನು ರಾಜೇಶ್ ಮೆಹನಿ ಎಂದು ಗುರುತಿಸಲಾಗಿದೆ. ಅವರು ಮೆಹನಿ ಮೆಡಿಕಲ್ ಸ್ಟೋರ್ ಒಂದನ್ನು ನಡೆಸುತ್ತಿದ್ದರು ಹಾಗೂ ಪ್ರತಿ ಗುರುವಾರ ಅವರು ಆ ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಯಿಬಾಬಾ ಭಕ್ತರಾಗಿದ್ದ ರಾಜೇಶ್ ಮೆಹನಿ, ದೇಗುಲದಲ್ಲಿ ಪರಿಕ್ರಮ ಮಾಡಲು ಸಾಯಿಬಾಬಾ ವಿಗ್ರಹದ ಬಳಿ ಪ್ರಾರ್ಥನೆ ಮಾಡಲೆಂದು ನೆಲದ ಮೇಲೆ ಕುಳಿತುಕೊಳ್ಳುತ್ತಾರೆ. ಆದರೆ, ಅವರಿಗೆ ಬಳಿಕ ಎದ್ದೇಳಲು ಆಗಲೇ ಇಲ್ಲ, ಇದಕ್ಕೆ ಕಾರಣ ಅವರಿಗೆ ಸೈಲೆಂಟ್ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ರಾಜೇಶ್ ಮೆಹನಿ ಅದೇ ಸ್ಥಳದಲ್ಲಿ ಸ್ವಲ್ಪ ಸಮಯದಿಂದ ಕೂತಿದ್ದರಿಂದ ಇತರೆ ಭಕ್ತರು ಅನುಮಾನಗೊಂಡು ಅವರನ್ನು ಎಬ್ಬಿಸಲು ಹೋದರೂ 15 ನಿಮಿಷಗಳಾದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ಇತರೆ ಭಕ್ತರು ಅನುಮಾನಗೊಂಡು ಅಲ್ಲಿನ ಅರ್ಚಕರನ್ನು ಕರೆದರು. ನಂತರ, ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅವರು ಅಲ್ಲಿಗೆ ಹೋಗುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
कटनी में साईं मंदिर में राकेश मेहानी नाम का युवक दर्शन करते समय गिरा और उसकी वहीं मौत हो गयी।
कितनी ऐसी मौत के बाद हम इस बात को मानेंगे कि यह वास्तव में यह गंभीर मुद्दा है जिसपर जाँच/शोध करने की तत्काल ज़रूरत है। pic.twitter.com/NsfFIIB0Dw— Narendra nath mishra (@iamnarendranath) December 3, 2022
