ಮಧ್ಯಪ್ರದೇಶ : ಟ್ರಕ್ ಏಕಾಏಕಿ ಜನರ ಮೇಲೆ ಹರಿದ ಪರಿಣಾಮ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿ, 10ಕ್ಕೂ ಹೆಚ್ಚು ಜನರು ಗಾಯಗೊಂಡಿರುವಂತ ಘಟನೆ ಮಧ್ಯಪ್ರದೇಶದಲ್ಲಿ.
ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ವೇಗವಾಗಿ ಬಂದ ಟ್ರಕ್ ಜನರ ಮೇಲೆ ಹರಿದ ಪರಿಣಾಮ 6 ಮಂದಿ ಮೃತಪಟ್ಟು, 10 ಮಂದಿ ಗಾಯಗೊಂಡಿದ್ದಾರೆ.
ಟ್ರಕ್ ರತ್ಲಾಮ್ನಿಂದ ಬದ್ನಾವರ್ಗೆ ಪ್ರಯಾಣಿಸುತ್ತಿದ್ದಾಗ ಅದರ ಟೈರ್ ಒಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ವೇಳೆ ಟ್ರಕ್ ವೇಗವಾಗಿ ಚಲಿಸಿದ್ದು ಏಕಾಏಕಿ ಟೈರ್ ಒಡೆದ ಪರಿಣಾಮ ನಿಯಂತ್ರಣ ತಪ್ಪಿದೆ. ಶರವೇಗದಲ್ಲಿ ಬಂದ ಟ್ರಕ್ ರಸ್ತೆ ಬಳಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಜನರ ಗುಂಪಿಗೆ ನುಗ್ಗಿದೆ.
Advertisement. Scroll to continue reading.

6 ಜನ ಸಾವನ್ನಪ್ಪಿದ್ದು, 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
In this article:Diksoochi news, diksoochi Tv, diksoochi udupi, Madhya Pradesh's Ratlam district, ದಿಕ್ಸೂಚಿ ನ್ಯೂಸ್

Click to comment