ಪರ್ಕಳ : ಕೆಳಪರ್ಕದಲ್ಲಿರುವ ನಗರಸಭೆಯ ನೀರಿನ ರೇಚಕದ ಎದುರು ಉಡುಪಿಯಿಂದ ಹೆಬ್ರಿ ಕಡೆಗೆ ಸಂಚರಿಸುತ್ತಿದ್ದ ಭತ್ತದ ಮೂಟೆ ಹೊತ್ತ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಟೂರಿಸ್ಟ್ ಕಾರಿನ ಮೇಲೆ ಬಿದ್ದಿದೆ. ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ.
ಬತ್ತದ ಮೂಟೆ ರಸ್ತೆಯೆಲ್ಲಾ ಚೆಲ್ಲಾಡಿದೆ. ಅದೃಷ್ಟವಶಾತ್ ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಉಡುಪಿಯಿಂದ ಪರ್ಕಳದ ಕಡೆ ಸಂಚರಿಸುವ ಬೇರೆ ಜಿಲ್ಲೆಯ ಹಾಗೂ ಅನ್ಯ ರಾಜ್ಯದ ವಾಹನ ಚಾಲಕರಿಗೆ ಇಲ್ಲಿ ಗೊಂದಲ ಉಂಟಾಗುತ್ತದೆ. ಹೊಸ ರಸ್ತೆಯ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಳೆದ 15 ದಿನಗಳಿಂದ ಸಂಚರಿಸಲು ಅವಕಾಶ ಮಾಡಿ ಕೊಟ್ಟಿರುತ್ತಾರೆ. ನಿನ್ನೆ ಸ್ಥಳೀಯರು ವಾಹನ ಚಲಾವಣೆಯಿಂದ ಧೂಳಾಗುತ್ತದೆ ಎಂದು ಮಣೆಪಾಲ ಠಾಣೆಗೆ ದೂರು ಸಹ ಕೊಟ್ಟಿದ್ದಾರೆ..ಇಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲ ಮತ್ತು ರಕ್ಷಣಾ
ಬ್ಯಾರಿಕೇಡ್ಗಳನ್ನು ತೆಗೆಯಲಾಗಿದೆ. ಸೂಕ್ತ ಬೆಳಕಿನ ವ್ಯವಸ್ಥೆಯು ಇಲ್ಲ ವಾಹನ ಚಾಲಕರು ಹಳೆ ರಸ್ತೆಯಲ್ಲಿ ಸಂಚರಿಸುವುದೇ ಹೊಸ ರಸ್ತೆಯಲ್ಲಿ ಸಂಚರಿಸುವುದೇ ಎಂದು ಗೊಂದಲ ಉಂಟುಮಾಡುತ್ತದೆ. ಈ ರೀತಿ ಹಿಂದೆಯೂ ಈ ಭಾಗದಲ್ಲಿ ವಾಹನ ಅಪಘಾತ ಘಟನೆ ನಡೆದಿದೆ. ಹೊಸ ರಸ್ತೆಯ ಕಾಮಗಾರಿ ನಡೆಸುತ್ತಿರುವಾಗಲೇ ವಾಹನ ಸಂಚಾರ ಮಾಡಿ ಕೊಟ್ಟಿರುವುದೇ ಇಲ್ಲಿ ಸಮಸ್ಯೆ ಕಂಡು ಬಂದಿದೆ ಮತ್ತು ವಾಹನ ಸಂಚಾರ ಮಾಡಿ ಪರಿಸರವೆಲ್ಲ ಧೂಳಿನಿಂದ ಕೂಡಿದೆ ಎಂದು ಸ್ಥಳೀಯರು ದೂರಿದ್ದಾರೆ.

