ಹಿರಿಯಡ್ಕ : ಓಂತಿಬೆಟ್ಟುನಲ್ಲಿರುವ “ಪ್ರೀತಿ “ನಿವಾಸದಲ್ಲಿ ಸುಂದರ ಕಾಂಚನ್ ಶ್ರೀಮತಿ ಕಮಲ ಎಸ್ ಕಾಂಚನ್ ಫ್ಯಾಮಿಲಿ ಇವರು ಬಜೆ ಮೇಲ್ಸಾಲು ಮೊಗವೀರ ಸಂಘ ( ರಿ,) ಹಿರಿಯಡ್ಕದ 17 ಗ್ರಾಮಸಭಾ ವ್ಯಾಪ್ತಿಯ ಸುಮಾರು 35 ವಿದ್ಯಾರ್ಥಿಗಳಿಗೆ 1,70,000 , ರೂಪಾಯಿ ವಿದ್ಯಾರ್ಥಿವೇತನವನ್ನು ತಮ್ಮ ನಿವಾಸದ ಆವರಣದಲ್ಲಿ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಶಾಸಕ ಲಾಲಾಜಿ ಆರ್. ಮೆಂಡನ್ ಅವರು ವಿದ್ಯಾರ್ಥಿ ವೇತನವನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿ, ಭವಿಷ್ಯದಲ್ಲಿ ಸಮಾಜ ಬಾಂಧವರಾದ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಸ್ಪರ್ಧೆಇರುತ್ತದೆ. ಅದನ್ನೆಲ್ಲ ಧೈರ್ಯದಿಂದ ಎದುರಿಸಿ, ಸರಕಾರಿ ಮತ್ತು ಖಾಸಗಿಯ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿ ಪ್ರಬುದ್ಧರಾಗಿ ಬೆಳೆದು ವಿದ್ಯಾರ್ಥಿಗಳು ಸಮಾಜದಲ್ಲಿ ಇತರರಿಗೆ ಮಾರ್ಗದರ್ಶಕರಾಗಿರಬೇಕು ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ,ದ.ಕ ಮೊಗವೀರ ಮಹಾಜನ ಸಂಘ ರಿ, ಉಚ್ಚಿಲ ಇದರ ಅಧ್ಯಕ್ಷ ಶ್ರೀಜಯ.ಸಿ.
ಕೊಟ್ಯಾನ್, ಬಜೆ ಮೇಲ್ಸಾಲು ಮೊಗವೀರ ಸಂಘ ರಿ, ಹಿರಿಯಡ್ಕ ಇದರಅಧ್ಯಕ್ಷರಾದ ವಿಠಲ ಕರ್ಕೆರಾ, ಕೊಲಾರ, ಮುಳಬಾಗಿಲು ವ್ಯಾಪ್ತಿಯ
(ಡಿವೈಎಸ್ಪಿ) ಜೈ ಶಂಕರ್, ಹಿರಿಯಡ್ಕದ ಮಾಧವ ಮಂಗಳಾಸಭಾಭವನದ ಅಧ್ಯಕ್ಷ ಉದಯ ಬಜೆ ಉಪಸ್ಥಿತರಿದ್ದರು.

ಬಾಲಕೃಷ್ಣ ಬಿ.ಕೆ ಕಾರ್ಯಕ್ರಮ ನಿರೂಪಿಸಿದರು. ಸಂದೀಪ್ ಓಂತಿಬೆಟ್ಟು ವಂದಿಸಿದರು.