ಪಶ್ಚಿಮಬಂಗಾಳ : ವ್ಯಕ್ತಿಯೊಬ್ಬ ಕುತ್ತಿಗೆಗೆ ಚುಚ್ಚಿದ ಶ್ರಿಶೂಲದೊಂದಿಗೆ ಬರೋಬ್ಬರಿ 65 ಕಿಮೀ ಪ್ರಯಾಣ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಭಾಸ್ಕರ್ ರಾಮ್ ಎಂಬುವವರು ಕಳೆದ ವಾರ ಕೋಲ್ಕತ್ತಾದ ನೀಲರತನ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ (ಎನ್ಆರ್ಎಸ್) ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶ್ರಿಶೂಲವು ವ್ಯಕ್ತಿಯ ಗಂಟಲಿಗೆ ಸಿಲುಕಿಸಿಕೊಂಡಿತ್ತು. ಈತ ಅದರ ಶಸ್ತ್ರಚಿಕಿತ್ಸೆಗಾಗಿ ಕಲ್ಯಾಣಿಯಿಂದ ಕೋಲ್ಕತ್ತಾದ ಎನ್ಆರ್ಎಸ್ ವೈದ್ಯಕೀಯ ಕಾಲೇಜಿಗೆ ಕನಿಷ್ಠ 65 ಕಿಲೋಮೀಟರ್ ಪ್ರಯಾಣಿಸಿದ್ದಾರೆ.
ವಿಚಿತ್ರವೆಂದರೇ ಈ ವ್ಯಕ್ತಿ ಅಳದೆ, ಕಿರುಚಾಡದೇ, ಶಾಂತವಾಗಿ ಕುಳಿತ್ತಿದ್ದರು ಎನ್ನಲಾಗಿದೆ. ಸದ್ಯ ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ವ್ಯಕ್ತಿಯು ನವೆಂಬರ್ 28 ರ ಮುಂಜಾನೆ ರಕ್ತಸಿಕ್ತ ಸ್ಥಿತಿಯಲ್ಲಿ ಆಸ್ಪತ್ರೆಗೆ ಆಗಮಿಸಿದ್ದ ಎನ್ನಲಾಗಿದೆ.
ಭಾಸ್ಕರ್ ರಾಮ್ ಬದುಕುಳಿಯುವ ಬಗ್ಗೆ ವೈದ್ಯರು ಸಂದೇಹ ವ್ಯಕ್ತಪಡಿಸಿದ್ದರೂ, ಆಶ್ಚರ್ಯಕರವಾಗಿ ತ್ರಿಶೂಲವು ಯಾವುದೇ ಅಂಗಗಳು, ರಕ್ತನಾಳಗಳಿಗೆ ಹಾನಿಯಾಗಿಲ್ಲ. ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯ ವೈದ್ಯರು ತ್ರಿಶೂಲವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಭಾಸ್ಕರ್ ರಾಮ್ ಹೇಗೆ ಗಾಯಗೊಂಡರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದು, ಸಂಪೂರ್ಣ ಗುಣಮುಖರಾಗುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
150 ವರ್ಷಗಳಷ್ಟು ಹಳೆಯದಾದ ತ್ರಿಶೂಲವನ್ನು ರಾಮನ ಮನೆಯಲ್ಲಿ ಬಲಿಪೀಠದ ಮೇಲೆ ಇರಿಸಲಾಗಿತ್ತು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಅವರು ತಲೆಮಾರುಗಳಿಂದ ಐತಿಹಾಸಿಕ ವಸ್ತುವನ್ನು ಪೂಜಿಸುತ್ತಿದ್ದಾರೆ ಎಂದು ಹೇಳಲಾಗಿದೆ.

