ಬ್ರಹ್ಮಾವರ : ಸೈಂಟ್ ಮೇರಿಸ್ ಸಿರಿಯನ್ ಕಾಲೇಜು, ಬ್ರಹ್ಮಾವರ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನಾ ಸಮಾರಂಭವು ಮಂಗಳವಾರ ನಡೆಯಿತು. ಬ್ರಹ್ಮಾವರ ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರಸನ್ನ ಅಡಿಗ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಉಡುಪ ಕೆ. ವಹಿಸಿಕೊಂಡಿದ್ದರು.
ಘಟಕದ ಯೋಜನಾಧಿಕಾರಿಗಳಾದ ರಘುರಾಮ್ ಶೆಟ್ಟಿ, ಮಮತಾ ಮೇರಿ ಅಮ್ಮ, ಸಹ ಯೋಜನಾಧಿಕಾರಿಗಳಾದ ಚಿತ್ರ ಶೆಟ್ಟಿ, ಸುಶ್ಮಿತಾ, ಅರುಣ್ ಕುಮಾರ್ ಎಚ್. ಹಾಗೂ ಘಟಕದ ಎಲ್ಲಾ ನಾಯಕರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಘಟಕದ ನಾಯಕನಾದ ಪ್ರತೀಕ್ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕುಮಾರಿ ದೀಕ್ಷಾ ಸ್ವಾಗತಿಸಿದರು. ಕಾರ್ತಿಕ್ ವಂದಿಸಿದರು. ಅವನೀಶ್ ಮತ್ತು ಸ್ನೇಹ ಕಾರ್ಯಕ್ರಮ ನಿರೂಪಣೆಗೊಂಡಿತು.
Advertisement. Scroll to continue reading.

In this article:brahmavara, Diksoochi news, diksoochi Tv, ಬ್ರಹ್ಮಾವರ, ಸೈಂಟ್ ಮೇರಿಸ್ ಸಿರಿಯನ್ ಕಾಲೇಜು

Click to comment