ಬೆಂಗಳೂರು : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕೆಜಿಎಫ್ ಖ್ಯಾತಿ ಕೃಷ್ಣ ಜಿ. ರಾವ್ ಅವರು ಬುಧವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ರಾಕಿಂಗ್ ಸ್ಟಾರ್ ಯಶ್ ಅವರ ʼಕೆಜಿಎಫ್ʼ ಸಿನಿಮಾದಲ್ಲಿ ತಾತನಾಗಿ ಕೃಷ್ಣಾಜಿ ರಾವ್ ಗಮನ ಸೆಳೆದಿದ್ದರು.
ಇತ್ತೀಚೆಗೆ ತಮ್ಮ ಸಂಬಂಧಿಕರ ಮನೆಯಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆ ದಾಖಲಿಸಲಾಗಿತ್ತು.
Advertisement. Scroll to continue reading.

ಕೃಷ್ಣಾಜಿ ಅವರಿಗೆ ಶ್ವಾಸಕೋಶದ ಸೋಂಕು ಉಂಟಾಗಿದ್ದು, ಅವರನ್ನು ಐಸಿಯು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು.
ಬೆಂಗಳೂರಿನ ಸೀತಾ ಸರ್ಕಲ್ ಬಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದ ಅವರು ಇಂದು ನಿಧನರಾಗಿದ್ದಾರೆ.
ಕೆಜಿಎಫ್ ಸಿನಿಮಾದ ಬಳಿಕ ಹಲವರು ಸಿನಿಮಾಗಳಲ್ಲಿ ಕೃಷ್ಣಾಜಿ ರಾವ್ ನಟಿಸಿದ್ದಾರೆ. ಇತ್ತೀಚೆಗೆ ಸೆಟ್ಟೇರಿದ್ದ ‘ನ್ಯಾನೊ ನಾರಾಯಣಪ್ಪ’ ಎಂಬ ಸಿನಿಮಾಕ್ಕೆ ಕೃಷ್ಣಾಜಿ ಅವರೇ ನಾಯಕರಾಗಿದ್ದರು.
Advertisement. Scroll to continue reading.

In this article:Diksoochinews, diksoochitv, diksoochiudupi, grandfather, kgf2, Krishna G.Rao

Click to comment