Connect with us

Hi, what are you looking for?

ಅಂತಾರಾಷ್ಟ್ರೀಯ

ದಕ್ಷಿಣ ಕೋರಿಯಾದಲ್ಲಿ ‘ಮೆದುಳು ತಿನ್ನುವ ಅಮೀಬಾ’ಗೆ ಮೊದಲ ಬಲಿ

2

ದಕ್ಷಿಣ ಕೊರಿಯಾ : ನೆಗ್ಲೇರಿಯಾ ಫೌಲೆರಿ ಅಥವಾ ‘ಮೆದುಳು ತಿನ್ನುವ ಅಮೀಬಾ’ ದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಬಗ್ಗೆ ದಕ್ಷಿಣ ಕೋರಿಯಾದ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಥೈಲ್ಯಾಂಡ್‌ನಿಂದ ಹಿಂದಿರುಗಿದ ನಂತರ ಸಾವನ್ನಪ್ಪಿದ ಕೊರಿಯಾದ ಪ್ರಜೆಗೆ ನೈಗ್ಲೇರಿಯಾ ಫೌಲೆರಿ ಸೋಂಕು ತಗುಲಿದೆ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ (ಕೆಡಿಸಿಎ) ದೃಢಪಡಿಸಿದೆ.

50ರ ಹರೆಯದ ಈ ವ್ಯಕ್ತಿ ನಾಲ್ಕು ತಿಂಗಳ ಕಾಲ ಆಗ್ನೇಯ ಏಷ್ಯಾ ರಾಷ್ಟ್ರದಲ್ಲಿ ತಂಗಿದ್ದ ನಂತರ ಡಿಸೆಂಬರ್ 10 ರಂದು ಕೊರಿಯಾಕ್ಕೆ ಮರಳಿದರು. ಮರುದಿನ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಕಳೆದ ವಾರ ಮಂಗಳವಾರ ನಿಧನರಾದರು ಎಂದು ವರದಿ ಆಗಿದೆ.

Advertisement. Scroll to continue reading.

ದೇಶದಲ್ಲಿ ವರದಿಯಾದ ಮೊದಲ ಸೋಂಕು ಇದಾಗಿದೆ. ಇದು 1937 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೊದಲ ಬಾರಿಗೆ ಪ್ರಕರಣ ವರದಿಯಾಯಿತು.

ನೇಗ್ಲೇರಿಯಾ ಫೌಲೆರಿ ಎಂಬುದು ವಿಶ್ವದಾದ್ಯಂತ ಬೆಚ್ಚಗಿನ ಸಿಹಿನೀರಿನ ಸರೋವರಗಳು, ನದಿಗಳು, ಕಾಲುವೆಗಳು ಮತ್ತು ಕೊಳಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಅಮೀಬಾವಾಗಿದೆ. ಅಮೀಬಾವನ್ನು ಮೂಗಿನ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಈ ಬಳಿಕ ಮೆದುಳಿನ ಅಂಗಾಂಶವನ್ನು ನಾಶಪಡಿಸುತ್ತದೆ ಎಂದು ಹೇಳಲಾಗಿದೆ.

ನೆಗ್ಲೇರಿಯಾ ಫೌಲೆರಿಯ ಮಾನವನಿಂದ ಮನುಷ್ಯನಿಗೆ ಹರಡುವ ಸಾಧ್ಯತೆಗಳು ಕಡಿಮೆ ಎಂದು ಕೆಡಿಸಿಎ ಹೇಳಿದೆ. ಆದರೆ ರೋಗವು ಕಾಣಿಸಿಕೊಂಡಿರುವ ಪ್ರದೇಶಗಳಲ್ಲಿ ನೀರಿನಲ್ಲಿ ಈಜುವುದನ್ನು ನಿಲ್ಲಿಸುವಂತೆ ಸ್ಥಳೀಯ ಆಡಳಿತವು ತಿಳಿಸಿದೆ.

ಅಮೆರಿಕ, ಭಾರತ ಮತ್ತು ಥೈಲ್ಯಾಂಡ್ ಸೇರಿದಂತೆ ವಿಶ್ವದಲ್ಲಿ 2018 ರ ವೇಳೆಗೆ ಒಟ್ಟು 381 ನೆಗ್ಲೇರಿಯಾ ಫೌಲೆರಿ ಪ್ರಕರಣಗಳು ವರದಿಯಾಗಿವೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!