ಅಯೋಧ್ಯೆ : ಜನವರಿ 22 ಇಡೀ ರಾಮಭಕ್ತರು ಉತ್ಸುಕತೆಯಿಂದ ಕಾಯುತ್ತಿರುವ ದಿನ. ಅಂದು ಪ್ರಿಯದೈವ ರಾಮಲಲ್ಲಾ ಪ್ರತಿಷ್ಠಾಪನೆಗೊಳ್ಳಲಿರುವ ಕ್ಷಣ….ಸದ್ಯ, ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಲು ಟ್ರಸ್ಟ್ ಆಮಂತ್ರಣ ಪತ್ರಗಳನ್ನು ಕಳುಹಿಸಲು ಪ್ರಾರಂಭಿಸಿದೆ.
ಜನವರಿ 16 ರಿಂದ ಒಂದು ವಾರಗಳವರೆಗೆ ಆಚರಣೆ ಆರಂಭಗೊಳ್ಳಲಿವೆ. ಆಕರ್ಷಣೀಯ ಆಮಂತ್ರಣ ಪತ್ರಿಕೆ ಸಿದ್ಧವಾಗಿದೆ. ದೇಶದ ಪ್ರಮುಖ ರಾಜಕಾರಣಿಗಳು, ಹಿಂದು ಸಂಘಟನೆಗಳ ಮುಖಂಡರು, ಸಾಧು-ಸಂತರಿಗೆ ಆಹ್ವಾನ ಪತ್ರಿಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಜನವರಿ 16ರಿಂದ ಆರಂಭವಾಗಲಿರುವ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವು ಏಳು ದಿನಗಳ ಕಾಲ ನಡೆಯಲಿದ್ದು, ಧಾರ್ಮಿಕ ವಿಧಿ ವಿಧಾನಗಳು ದೊಡ್ಡ ಮಟ್ಟದಲ್ಲಿ ನೆರವೇರಲಿವೆ. ಜನವರಿ 22ರಂದು, ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಶ್ರೀ ರಾಮ ಲಲ್ಲಾ ದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ.
Advertisement. Scroll to continue reading.
In this article:ayodhya, Consecration Ceremony, Diksoochi news, Featured, invitation, PM Modi, rama mandi, yogi adityanath
Click to comment