ಮಂಡ್ಯ : ನಾಟಕ ವೇಳೆ ಕಲಾವಿದರೊಬ್ಬರು ಕುಸಿದು ಬಿದ್ದಿರುವ ನಾಟಕ ಮಳವಳ್ಳಿ ತಾಲೂಕಿನ ಬಂಡೂರು ಗ್ರಾಮದ ಬಸವನಗುಡಿಯಲ್ಲಿ ನಡೆದಿದೆ.
ನಂಜಯ್ಯ ರಂಗಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟ ಕಲಾವಿದ. ಅವರಿಗೆ 46 ವರ್ಷ ವಯಸ್ಸಾಗಿತ್ತು.
ಕುರುಕ್ಷೇತ್ರದ ಕೃಷ್ಣ ಸಂಧಾನ ನಾಟಕ ಪ್ರದರ್ಶನದಲ್ಲಿ ಸಾರ್ಥಕಿ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದ ನಂಜಯ್ಯ ವೇದಿಕೆಯ ಮೇಲೆಯೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಸಹಕಲಾವಿದರು ಕಾರ್ಯಕ್ರಮ ಅರ್ಧಕ್ಕೆ ನಿಲ್ಲಿಸಿದ್ದಾರೆ.
Advertisement. Scroll to continue reading.

ಮಳವಳ್ಳಿ ತಾಲೂಕಿನ ವಿವಿಧ ಗ್ರಾಮಗಳ ಕಲಾವಿದರು ಸೇರಿಕೊಂಡು ಪೌರಾಣಿಕ ನಾಟಕ ಆಯೋಜಿಸಿದ್ದರು. ಸಾರ್ಥಕಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿ ನಟನೆ ಮಾಡುವ ವೇಳೆ ವೇದಿಕೆಯಲ್ಲೇ ಹೃದಯಾಘಾತ ಸಂಭವಿಸಿ ಕಲಾವಿದ ನಂಜಯ್ಯ ಪ್ರಾಣ ಬಿಟ್ಟಿದ್ದಾರೆ.
ಕಲಾವಿದ ನಂಜಯ್ಯ ಕುಸಿದು ಬೀಳುತ್ತಿದ್ದಂತೆ ಕೂಡಲೇ ಅಲ್ಲಿದ್ದ ಜನರು ಮಳವಳ್ಳಿ ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲಿಸಿದರಾದರೂ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
Advertisement. Scroll to continue reading.

In this article:Artist, Artist death, death in stage, Diksoochi news, diksoochi Tv, diksoochi udupi, mandya, ಮಂಡ್ಯ

Click to comment