ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ನೀಲಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ವಿಕಾಸ ಅನುದಾನದಡಿ 12 ಲಕ್ಷ ಅಂದಾಜಿನಲ್ಲಿ ನಿರ್ಮಿಸಲಾದ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಆರಂಭಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯತಿ ಅಧ್ಯಕ್ಷ ಮಹೇಂದ್ರ ಕುಮಾರ್ ಮಾತನಾಡಿ, ಪ್ರಥಮ ಹಂತದಲ್ಲಿ ನೀಲಾವರ ಗ್ರಾಮದ 5ಸೆನ್ಸ್ ಕಾಲೋನಿ, ಅಂಗಡಿ, ಹೋಟೆಲ್, ದೇವಸ್ಥಾನ, ಸಭಾಭವನಗಳ ಒಣ ಕಸವನ್ನು ಸಂಗ್ರಹಿಸಲಾಗುತ್ತಿದೆ. ಅತೀ ಶೀಘ್ರದಲ್ಲಿ ಬಹುತೇಕ ಎಲ್ಲ ಮನೆಗಳ ಒಣ ಮತ್ತು ಹಸಿ ಕಸವನ್ನು ಸಂಗ್ರಹಿಸಲಾಗುವುದು ಎಂದರು.

ಜಾಗದ ದಾನಿಗಳಾದ ಸುಧೀರ್ ರಾವ್ ಪರವಾಗಿ ತಂದೆ ಸುಬ್ಬಾರಾವ್ ಅವರನ್ನು ಪಂಚಾಯಿತಿ ವತಿಯಿಂದ ಗೌರವಿಸಲಾಯಿತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾಬಾಳಿಗ, ಪಂಚಾಯಿತಿ ಉಪಾಧ್ಯಕ್ಷೆ ಕೆ.ಬೇಬಿ, ಸದಸ್ಯರಾದ ಗುರುರಾಜ ಮಕ್ಕಿತ್ತಾಯ, ಉಮೇಶ್ ಶೆಟ್ಟಿ, ಜ್ಯೋತಿಶೆಟ್ಟಿ, ಪ್ರಿಯಾ ಎಚ್, ಸುಮಾ ದೇವಾಡಿಗ, ಎಸ್.ಎಲ್.ಆರ್.ಎಂ ಘಟಕದ ಮೇಲ್ವಿಚಾರಕಿ ಭವ್ಯಾ, ಸಂಜೀವಿನಿ ಸಂಘದ ಅಧ್ಯಕ್ಷೆ ಮಮತಾ ಮಧ್ಯಸ್ಥ, ಮನೋಹರ್ ಶೆಟ್ಟಿ,
ಗ್ರಾಮ ಪಂಚಾಯಿತಿ ಲೆಕ್ಕ ಸಹಾಯಕರು ಸಿಬ್ಬಂದಿಗಳು , ಅಂಗನವಾಡಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
