ಬೆಂಗಳೂರು : ಸಿಲಿಕಾನ್ ಸಿಟಿಯ ಕೆ.ಆರ್ ಮಾರ್ಕೇಟ್ ಬಳಿ ಪ್ಲೈಓವರ್ ಮೇಲಿಂದ ಹಣ ಸುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರುಣ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆತ ವಿಚಾರಣೆ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಲೈಕ್ಸ್ , ಪ್ರಚಾರ ಸಿಗಲಿ ಎಂದು ಹೀಗೆ ಮಾಡಿದೆ. ಬೇರೆ ಯಾವ ದುರುದ್ದೇಶ ಇಲ್ಲ ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಚಾಮರಾಜಪೇಟೆ ಠಾಣೆಯಲ್ಲಿ ಚಿಕ್ಕಪೇಟೆ ಎಸಿಪಿ ನೇತೃತ್ವದಲ್ಲಿ ವಿಚಾರಣೆ ನಡೆದಿದ್ದು, ಬೇರೆಯವರು ಬೇರೆ ಬೇರೆ ರೀತಿ ಮಾರ್ಕೆಂಟಿಂಗ್ ಮಾಡುತ್ತಾರೆ, ನಾನು ಈ ತರ ಮಾರ್ಕೆಂಟಿಗ್ ಮಾಡಿ ಜನಪ್ರಿಯನಾಗಲು ಯೋಚಿಸಿದೆ ಎಂದಿದ್ದಾನೆ.

ಟ್ರಾಫಿಕ್ ಜಾಮ್ ಮಾಡಿ ಜನರು ಅಪಾಯಕಾರಿಯಾಗಿ ಓಡಾಡಲು ಕಾರಣನಾದ ಆರೋಪಿ ಅರುಣ್ ವಿರುದ್ಧ ಸಿಟಿ ಮಾರ್ಕೆಟ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ಸಿಲಿಕಾನ್ ಸಿಟಿಯ ಕೆ.ಆರ್ ಮಾರ್ಕೇಟ್ ಬಳಿ ಪ್ಲೈಓವರ್ ಮೇಲಿಂದ ಅರುಣ್ ಎಂಬಾತ ಗರಿಗರಿಯ 10 ರೂಪಾಯಿ ನೋಟು ಸುರಿಸಿ ಎಸ್ಕೇಪ್ ಆಗಿದ್ದ. ಈ ವೀಡಿಯೋಗಳು ವೈರಲ್ ಆಗಿತ್ತು. ಏಕಾಏಕಿ ದುಡ್ಡು ಸಿರಿದುದ ಕಂಡ ಜನರು ಆರಿಸಿಕೊಳ್ಳಲು ಮುಗಿಬಿದ್ದಿದ್ದರು.
ಆ ಬಳಿಕ ಅರುಣ್ ಅಲ್ಲಿಂದ ನಡೆದಿದ್ದ. ಸಿನಿಮೀಯ ರೀತಿಯಲ್ಲಿ ಹಣ ಎಸೆದ ಅರುಣ್ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ, ಅರುಣ್ ಪೊಲೀಸರ ವಶದಲ್ಲಿದ್ದಾನೆ.

