ಉಡುಪಿ: ಸುಗಮ ಸಂಗೀತ ಗಾಯಕ, ಖ್ಯಾತ ಗಮಕ ಕಲಾವಿದ, ನಿವೃತ್ತ ಅಧ್ಯಾಪಕ ಚಂದ್ರಶೇಖರ ಕೆದ್ಲಾಯ ಅವರು ಇಂದು ವಿಧಿವಶರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಇಂದು ಬೆಳಗ್ಗೆ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಕೆದ್ಲಾಯ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಅಭಿಮಾನಿ, ಬಂಧು-ಬಳಗವನ್ನು ಅಗಲಿದ್ದಾರೆ.
ಚಂದ್ರಶೇಖರ ಕೆದ್ಲಾಯ ಅವರು 1950 ಏಪ್ರಿಲ್ 23ರಂದು ಉಡುಪಿ ಜಿಲ್ಲೆಯ ಹೆಸ್ಕತ್ತೂರು ಗ್ರಾಮದ ಹಾರಾಡಿಯಲ್ಲಿ ಜನಿಸಿದ್ದರು.
Advertisement. Scroll to continue reading.

ಶಿಕ್ಷಕ – ಕಲಾವಿದ :
ಅವರು ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆಯಲ್ಲಿ ಸುಮಾರು ಮೂರು ದಶಕಕ್ಕೂ ಅಧಿಕ ಕಾಲ ಕನ್ನಡ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು.
ಹಿರಿಯ ಆಕಾಶವಾಣಿ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದರು.
ಖ್ಯಾತ ಗಮಕಿ ಕಲಾವಿದರಾಗಿದ್ದ ಕೆದ್ಲಾಯರಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
Advertisement. Scroll to continue reading.

In this article:

Click to comment