ಪರ್ಕಳ : ಮಾರ್ಕೆಟ್ ಬಳಿ ನಗರಸಭೆಗೆ ಸೇರಿದ ಕಟ್ಟಡದಲ್ಲಿರುವ ಪ್ರಕಾಶ್ ಲಾಂಡ್ರಿಯ ಎದುರುಗಡೆ ಇರುವ ಮರದಿಂದ ತಟ್ಟನೆ ಹಾರಿದ ಹಾವು ಎಲ್ಲರ ಗಮನ ಸೆಳೆಯಿತು. ಈ ಹಾವು ಸುಮಾರು ಎರಡೂವರೆ ಸೀಟು ಉದ್ದವಿದೆ. ಹಾವಿನ ಎಲ್ಲಾ ಭಾಗಗಳು ಕಪ್ಪುಬಳಿ ಗೆರೆಗಳಿದ್ದವು, ಕೆಂಪು ಬಣ್ಣ ಹೊಂದಿತ್ತು ಎಲ್ಲರು ವಿಷಹಾವು ಎಂದು ತಿಳಿದು ಭಯಭೀತರಾದರು.
ತಕ್ಷಣ ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಮಾಹಿತಿ ತಿಳಿಸಿದಾಗ ಅವರು, ಇದೊಂದು ವಿಷ ರಹಿತ. ಹಾರುವಹಾವು ಎಂದು ಕನ್ನಡದ ಭಾಷೆಯಲ್ಲಿ ಕರೆಯುತ್ತಾರೆ.(ತುಳುಬಾಷೆಯಲ್ಲಿ ಪುಲ್ಲಿ ಪುತ್ರ) ಎಂದು ಕರೆಯುತ್ತಾರೆ. ಭಯಪಡುವ ಅವಶ್ಯಕತೆ ಇಲ್ಲ. ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಲಾಂಡ್ರಿ ಮಾಲೀಕ ಹರೀಶ್ ಮಡಿವಾಳ, ಸದಾಶಿವಮಡಿವಾಳ, ಶಿವರಾಂ ಪೂಜಾರಿ, ಜಯಂತ್ ಟೈಲರ್ ಜೊತೆಗಿದ್ದರು. ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಅವರು ಈ ಮಾಹಿತಿ ನೀಡಿ ಸ್ಥಳೀಯರಿಗೆ ಹಾವಿನ ಕುರಿತು ಅರಿವು ಮೂಡಿಸಿದ್ದಾರೆ.
Advertisement. Scroll to continue reading.

In this article:Diksoochi news, diksoochi Tv, diksoochi udupi, ornate flying snake, parkala, ಹಾರುವ ಹಾವು

Click to comment