ಇತ್ತೀಚಿಗಷ್ಟೇ `ಆರ್ಆರ್ಆರ್’ (RRR) ಸಿನಿಮಾದ ʻಗೋಲ್ಡನ್ ಗೋಬ್ಸ್ʼ ಅವಾರ್ಡ್ ಬಾಚಿಕೊಂಡಿತ್ತು. ಇದರ ಬೆನ್ನಲ್ಲೇ ಆಸ್ಕರ್ ಪ್ರಶಸ್ತಿಯ ನಾಮ ನಿರ್ದೇಶನ ಸಾಲಿಗೆ ‘ಆರ್ಆರ್ಆರ್’ ಚಿತ್ರದ ನಾಟು ನಾಟು ಹಾಡು ಕೂಡ ಸೇರಿಕೊಂಡಿದೆ.
ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ನಲ್ಲಿ ಇಂದು ಆಸ್ಕರ್ ಪ್ರಶಸ್ತಿಯ ನಾಮ ನಿರ್ದೇಶನ ಘೋಷಣೆ ಕಾರ್ಯಕ್ರಮ ನಡೆದಿದೆ. ಯಾವೆಲ್ಲ ಸಿನಿಮಾಗಳು ನಾಮಿನೇಷನ್ ಆಗಲಿವೆ ಎನ್ನುವ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ.
ಈ ಬಾರಿಯ ಪ್ರಶಸ್ತಿಗಾಗಿ ಒಟ್ಟು ಮುನ್ನೂರು ಸಿನಿಮಾಗಳನ್ನು ಆಯ್ಕೆ ಮಾಡಲಾಗಿತ್ತು. ಮುನ್ನೂರು ಸಿನಿಮಾಗಳಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಓರಿಜಿನಲ್ ಸಾಂಗ್ ನಾಮ ನಿರ್ದೇಶನದಲ್ಲಿ ಹಾಲಿವುಡ್ ಚಿತ್ರಗಳ ಜೊತೆ ರಾಜಮೌಳಿ ನಿರ್ದೇಶನದ `ಆರ್ಆರ್ಆರ್’ ಚಿತ್ರದ ನಾಟು ನಾಟು ಹಾಡು ಕೂಡ ಸೇರಿಕೊಂಡಿದೆ.

ತೆಲುಗಿನ `ನಾಟು ನಾಟು’ ಬೆಸ್ಟ್ ಓರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಷನ್ ಆಗಿದ್ದು, ಇನ್ನೂ ಇದರ ಜೊತೆಗೆ ಭಾರತದ `ಆಲ್ ದಟ್ ಬ್ರೀಥ್ಸ್’, ಮತ್ತು `ದಿ ಎಲೆಫೆಂಟ್ ವಿಸ್ಪರರ್ಸ್’ ಎಂಬ ಕಿರುಚಿತ್ರಗಳು ಕೂಡ ನಾಮಿನೇಟ್ ಆಗಿವೆ. ಈ ಮೂಲಕ ಭಾರತಕ್ಕೆ ಆಸ್ಕರ್ ಗೆಲ್ಲುವ ಚಾನ್ಸ್ ದಟ್ಟವಾಗಿದೆ.
ನಾಮಿನೇಷನ್ಗೆ ಆಯ್ಕೆಯಾದ ಸಿನಿಮಾಗಳಲ್ಲಿ ಮತ್ತೆ ಆಸ್ಕರ್ ಪ್ರಶಸ್ತಿಗಾಗಿ ಆಯ್ಕೆ ನಡೆಯಲಿದೆ. ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಸಿನಿಮಾಗಳನ್ನು ಮಾರ್ಚ್ 12 ರಂದು ಘೋಷಿಸಲಾಗುವುದು. ಕೇವಲ ನಾಮ ನಿರ್ದೇಶನಗೊಂಡ ಸಿನಿಮಾಗಳನ್ನು ಮಾತ್ರ ಇದೀಗ ಘೋಷಿಸಲಾಗಿದೆ.

