ಚಿರತೆಯೊಂದು ಮುಳ್ಳು ಹಂದಿಯ ಮರಿಯನ್ನು ಬೇಟೆಯಾಡಲು ಪ್ರಯತ್ನಿಸಿರೋ ವೀಡಿಯೋ ಇದೀಗ ಫುಲ್ ವೈರಲ್ ಆಗಿದೆ.
ಮುಳ್ಳು ಹಂದಿಯ ಗುಂಪೊಂದು ರಸ್ತೆ ದಾಟುವ ಸಂದರ್ಭದಲ್ಲಿ ಚಿರತೆಯೊಂದು ಎದುರಾಗುತ್ತದೆ. ಈ ಸಂದರ್ಭದಲ್ಲಿ ತನ್ನ ಮರಿಯನ್ನು ರಕ್ಷಿಸಲು ಎರಡು ಮುಳ್ಳುಹಂದಿ ಗರಿ ಬಿಡಿಸಿ ಮುಳ್ಳುಗಳನ್ನು ಚಿರತೆಗೆ ಎರಗಿಸುತ್ತದೆ. ಇದರಿಂದ ಅದೆಷ್ಟೇ ಪ್ರಯತ್ನಿಸಿದರೂ ಚಿರತೆಗೆ ಮುಳ್ಳು ಹಂದಿ ಮರಿ ಮಾತ್ರ ಸಿಗುವುದೇ ಇಲ್ಲ.
ಇದರಿಂದ ನಿರಾಶೆಗೊಂಡು ಹುಲಿಯು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತನ್ನ ಪಾಡಿಗೆ ತಾನು ಹೊರಟು ಹೋಗುತ್ತದೆ. ಈ ವೀಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಮುಳ್ಳುಹಂದಿ ಮರಿಗೆ ತನ್ನ ಪೋಷಕರಿಂದ ಝಡ್ ಕ್ಲಾಸ್ ಸೆಕ್ಯುರಿಟಿ ಎಂದು ಹೇಳಲಾಗಿದೆ. ಅಲ್ಲದೇ, ಇದೊಂದು ಅಪರೂಪದ ದೃಶ್ಯ ಎನ್ನುತ್ತಿದ್ದಾರೆ.
Advertisement. Scroll to continue reading.

In this article:cubs, Diksoochi news, diksoochi Tv, diksoochi udupi, Hedgehogs, leopard

Click to comment