ದಿನಾಂಕ : ೨೫-೦೧-೨೩, ವಾರ : ಬುಧವಾರ, ತಿಥಿ: ಚೌತಿ, ನಕ್ಷತ್ರ: ಪೂರ್ವಾಭಾದ್ರ
ಧಾರ್ಮಿಕ ಆಸಕ್ತಿ ಹೆಚ್ಚಲಿದೆ. ಅಂದುಕೊಂಡ ಗುರಿ ಸಾಧಿಸುವಿರಿ. ವಿದ್ಯಾರ್ಥಿಗಳು ಕಡಿಮೆ ಪ್ರಯತ್ನದಿಂದ ಯಶಸ್ಸು. ರಾಮನ ನೆನೆಯಿರಿ.
ಅವಿವಾಹಿತರಿಗೆ ವಿವಾಹ ನಿಶ್ಚಯವಾಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವ್ಯವಹಾರದಲ್ಲಿ ಲಾಭ ಇರಲಿದೆ. ನಾಗಾರಾಧನೆ ಮಾಡಿ.

ಹಿರಿಯರ ಸಲಹೆ ಪಾಲಿಸಿ. ಪ್ರೀತಿ ಪಾತ್ರರೊಂದಿಗೆ ಉತ್ತಮ ಬಾಂಧವ್ಯ. ಆತ್ಮವಿಶ್ವಾಸ ಹೆಚ್ಚಲಿದೆ. ಶಿವನ ಆರಾಧಿಸಿ.
ವೈವಾಹಿಕ ಸಂಬಂಧಗಳಲ್ಲಿ ಸಮಸ್ಯೆ ಕಾಣಲಿದೆ. ತಾಳ್ಮೆಯಿಂದ ಇರುವುದು ಉತ್ತಮ. ಆರೋಗ್ಯದ ಕಾಳಜಿ ಅಗತ್ಯ. ದೇವಿಯ ನೆನೆಯಿರಿ.
ಉನ್ನತಾಧಿಕಾರಿಗಳಿಂದ ಸಲಹೆ ಪಡೆಯುವಿರಿ. ರಾಜಕಾರಣಿಗಳಿಗೆ ಉತ್ತಮ ಸಮಯ. ಸಂಗಾತಿಯಿಂದ ಬೆಂಬಲ ಸಿಗಲಿದೆ. ವಿಷ್ಣುವನ್ನು ನೆನೆಯಿರಿ.
ಕೌಟುಂಬಿಕ ವಾತಾವರಣ ಉತ್ತಮವಾಗಿರಲಿದೆ. ಧಾರ್ಮಿಕ ಆಸಕ್ತಿ ಹೆಚ್ಚಲಿದೆ. ಗಂಟಲು ನೋವು ಕಾಡಲಿದೆ. ಮಂಜುನಾಥನ ನೆನೆಯಿರಿ.

ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಕೆಲಸದಲ್ಲಿ ಬಡ್ತಿ. ಅತಿಯಾದ ಕೆಲಸದಿಂದ ಆಯಾಸ ಹೆಚ್ಚಲಿದೆ. ರಾಮನ ನೆನೆಯಿರಿ.
ಸಂಗಾತಿಯೊಂದಿಗೆ ಸಾಮರಸ್ಯ. ಹೊರಗಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಬೆಲೆಬಾಳುವ ವಸ್ತು ಬಗ್ಗೆ ಎಚ್ಚರ ವಹಿಸಿ. ಶಿವನ ಆರಾಧಿಸಿ.
ಸಾಮಾಜಿಕ ಸ್ಥಾನಮಾನ ಸಿಗಲಿದೆ. ನಿಮ್ಮ ಪ್ರತಿಭೆಗೆ ಉತ್ತಮ ಅವಕಾಶ. ಹಳೆ ಸ್ನೇಹಿತರೊಂದಿಗೆ ಭೇಟಿ. ಶನೈಶ್ಚರನ ನೆನೆಯಿರಿ.
ಹಿರಿಯರ ಸಲಹೆ ಪಾಲಿಸಿ. ಹೊಸ ಉದ್ಯೋಗವಕಾಶ ಪಡೆಯುವಿರಿ. ವ್ಯಾಪಾರದಲ್ಲಿ ಹೊಸ ಒಪ್ಪಂದ. ಗಣಪನ ನೆನೆಯಿರಿ.

ವಿದೇಶದಲ್ಲಿರುವವರಿಗೆ ಉತ್ತಮ ಲಾಭ. ಉತ್ತಮ ಕಾರ್ಯದಲ್ಲಿ ಆಸಕ್ತಿ. ಮನೆಗೆ ಅತಿಥಿಗಳ ಆಗಮನ. ರಾಯರ ಆರಾಧಿಸಿ.
ಕೆಲಸದ ವಿಚಾರದಲ್ಲಿ ಶ್ರಮದ ಅಗತ್ಯವಿದೆ. ಮನೆಯ ಸಮಸ್ಯೆಗಳನ್ನು ನಿವಾರಿಸುವತ್ತಲೂ ಗಮನ ಅಗತ್ಯ. ಹಣ ವ್ಯಯವಾಗಲಿದೆ. ಗುರುವ ನೆನೆಯಿರಿ.

