ಉಡುಪಿ : ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಅವರ ವಾಹನ ಚಾಲಕ ಇಂದು ನಸುಕಿನ ವೇಳೆ ಇಂದ್ರಾಳಿ ರೈಲ್ವೆ ಸೇತುವೆ ಸಮೀಪ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಹೆಬ್ರಿ ಸಳಂಜೆ ಗ್ರಾಮದ ಸಂಜೀವ ಹೆಗ್ಡೆ ಎಂಬವರ ಪುತ್ರ ರಾಘವೇಂದ್ರ ಹೆಗ್ಡೆ ಆತ್ಮಹತ್ಯೆ ಮಾಡಿಕೊಂಡವರು.
ವೈಯಕ್ತಿಕ ಕಾರಣದಿಂದ ಮನನೊಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಂಗಳೂರು ಮನಪಾ ಮುಖ್ಯ ಲೆಕ್ಕಾಧಿಕಾರಿಗೆ ಸಂಬಂಧಿಸಿದ ಕಾರನ್ನು ಅಲ್ಲೇ ಸಮೀಪ ನಿಲ್ಲಿಸಿ, ಬಳಿಕ ಚಲಿಸುತ್ತಿದ್ದ ರೈಲಿನಡಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗುತ್ತಿದೆ.

ಮೃತದೇಹ ಸಂಪುರ್ಣ ಛಿದ್ರವಾಗಿದ್ದು, ಸ್ಥಳದಲ್ಲಿ ಪತ್ತೆಯಾದ ಕಾರಿನ ಹಸಿರು ಫಲಕದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಎಂಬ ಉಲ್ಲೇಖ ಹಾಗೂ ಮೃತರ ಕಿಸೆಯಲ್ಲಿ ಆಧಾರ್ ಕಾರ್ಡ್ ಆಧಾರದಲ್ಲಿ ವ್ಯಕ್ತಿಯ ಗುರುತು ಪತ್ತೆ ಹಚ್ಚಲಾಗಿದೆ.
ಮಣಿಪಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಸಮಾಜ ಸೇವಕ ನಿತ್ಯಾನಂದ ಒಳಕಾಡು ಮೃತದೇಹವನ್ನು ಸಾಗಿಸಲು ನೆರವಾದರು.

