ಮಧ್ಯಪ್ರದೇಶ: ಚಲಿಸುತ್ತಿದ್ದ ರೈಲನ್ನು ಹತ್ತುವಾಗ ಕಾಲು ಜಾರಿ ರೈಲಿನ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನೋರ್ವರನ್ನು ಮಹಿಳಾ ಕಾನ್ಸ್ಟೇಬಲ್ ರಕ್ಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಈ ಕುರಿತಂತೆ ದಿನೇಶ್ ಕುಮಾರ್ ಎಂಬುವವರು ಟ್ವಿಟರ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ಚಲಿಸುತ್ತಿರುವ ರೈಲನ್ನು ಹತ್ತುವಾಗ ಪ್ರಯಾಣಿಕನೋರ್ವ ಆಯ ತಪ್ಪಿ ಕಳೆಗೆ ಬೀಳುತ್ತಾನೆ.

ತಕ್ಷಣ ಇದನ್ನು ಗಮನಿಸಿದ ರೈಲ್ವೆ ಸಂರಕ್ಷಣಾ ಪಡೆ (ಆರ್ಪಿಎಫ್) ಮಹಿಳಾ ಕಾನ್ಸ್ಟೇಬಲ್ ಸಮಯ ಪ್ರಜ್ಞೆಯಿಂದ ಪ್ರಯಾಣಿಕನನ್ನು ರಕ್ಷಿಸಿದ್ದಾರೆ. ಸದ್ಯ ವೀಡಿಯೋ ವೈರಲ್ ಆಗಿದೆ.
ಇನ್ನು ವಿಡಿಯೋ ವೀಕ್ಷಿಸಿದ ಮಂದಿ ಸಾಕಷ್ಟು ಕಮೆಂಟ್ಗಳು ಬಂದಿವೆ. ನೆಟ್ಟಿಗರು ಮಹಿಳಾ ಕಾನ್ಸ್ಟೆಬಲ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
मध्य प्रदेश के रतलाम जिले में एक महिला आरक्षक ने रेलवे स्टेशन पर बड़ी फुर्ती से एक यात्री की जान बचा ली। इस पूरी घटना का वीडियो वायरल हो रहा है। यह यात्री चलती ट्रेन के नीचे आने वाला था लेकिन महिला आरक्षक ने हाथ पकड़कर उसे बाहर खींच लिया।https://t.co/9qkBx39eXk pic.twitter.com/oD0fjHffNP— Dinesh Kumar (@DineshKumarLive) January 24, 2023

