ವರದಿ : ಬಿ. ಎಸ್. ಆಚಾರ್ಯ
ಬ್ರಹ್ಮಾವರ : ಬ್ರಹ್ಮಾವರ ತಾಲೂಕು ಆಡಳಿತ , ಕಾನೂನು ಸೇವೆಗಳ ಸಮಿತಿ ಕುಂದಾಪುರ , ವಕೀಲರ ಸಂಘ ಕುಂದಾಪುರ ಇವರ ವತಿಯಿಂದ ಬುಧವಾರ ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನೇಶನಲ್ ಪದವ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ರಾಷ್ಟ್ರೀಯ ಮತದಾರ ದಿನ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ಕುಂದಾಪುರ ಹಿರಿಯ ಸಿವಿಲ್ ನ್ಯಾಯಾಧೀಶ ರಾಜು ಎನ್ ಅವರು ಮಾತನಾಡಿ, ದೇಶದ ಪ್ರಗತಿ ಬಲಿಷ್ಠ ರಾಷ್ಟ್ರ ನಿರ್ಮಾಣ ಯುವಜನರಿಂದ. ಆದುದರಿಂದ ಯುವ ಮತದಾರು ಮತದಾನವನ್ನು ಕಡ್ಡಾಯವಾಗಿ ಚಲಾಯಿಸ ಬೇಕು ಎಂದರು.
ಇದೇ ಸಂದರ್ಬದಲ್ಲಿ ಹೊಸ ಮತದಾರರ ಗುರುತು ಚೀಟಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಮತದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು ಮತ್ತು ಅತೀ ಹೆಚ್ಚು ಮತದಾರದ ನೊಂದಣಿ ಮಾಡಿದ ಬಿ ಎಲ್ ಓ ಗಳನ್ನು ಮತ್ತು ಸಲಹೆ ನೀಡಿದ ಕಂದಾಯ ಅಧಿಕಾರಿಗಳನ್ನು ಗೌರವಿಸಲಾಯಿತು.
ಬ್ರಹ್ಮಾವರ ತಹಶೀಲ್ದಾರ ರಾಜಶೇಖರ ಮೂರ್ತಿ ,ಕಾಲೇಜಿನ ಪ್ರಿನ್ಸಿಪಾಲ್ ಡಾ, ರಮೇಶ್ ಆಚಾರ್ಯ , ಕುಂದಾಪುರ ನ್ಯಾಯವಾದಿಗಳಾದ ಬನ್ನಾಡಿ ಸೋಮನಾಥ್ ಹೆಗ್ಡೆ , ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು.
