ಕಿರುಕುಳಕ್ಕೆ ಹೆದರಿ ಮಹಿಳೆಯೊಬ್ಬರು ಚಲಿಸುತ್ತಿದ್ದ ಬಸ್ಸಿನ ಕಿಟಕಿಯಿಂದ ಜಿಗಿದಿದ್ದಾರೆ. ಪರಿಣಾಮ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬಿಹಾರದ ಪುರ್ನಿಯಾದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ಸಿಲಿಗುರಿಗೆ ಬಸ್ನಲ್ಲಿ ಶಿಕ್ಷಕಿ ಪ್ರಯಾಣಿಸುತ್ತಿದ್ದರು.
ಆ ಸಮಯದಲ್ಲಿ ದಲ್ಖೋಲಾ ಚೆಕ್ ಪೋಸ್ಟ್ ಮೊದಲು ನಾಲ್ವರು ಪುರುಷರು ಬಸ್ ಹತ್ತಿದ್ದರು ಎನ್ನಲಾಗಿದೆ.
Advertisement. Scroll to continue reading.

ಅವರ ವರ್ತನೆಯ ಬಗ್ಗೆ ಮಹಿಳೆ ಭಯಗೊಂಡು ಕಿರುಕುಳದ ಭಯದಿಂದ ಆಕೆ ಚಲಿಸುತ್ತಿದ್ದ ಬಸ್ಸಿನ ಕಿಟಕಿಯಿಂದ ಹೊರಗೆ ಹಾರಿದ್ದಾಳೆ ಎಂದು ತಿಳಿದುಬಂದಿದೆ.
ಬೈಸಿ ಪೊಲೀಸ್ ಠಾಣೆಯಲ್ಲಿ ಹಿಜ್ಲಾ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹಿಳೆ ಪತ್ತೆಯಾಗಿದ್ದಾರೆ. ಪೊಲೀಸ್ ಗಸ್ತು ತಂಡವು ಶಿಕ್ಷಕಿಯನ್ನು ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಉತ್ತಮ ಚಿಕಿತ್ಸೆಗಾಗಿ ಸಿಲಿಗುರಿಗೆ ಕಳುಹಿಸಲಾಗಿದೆ. ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿದ್ದು, ಕೈ ಮುರಿದಿದೆ ಎಂದು ವರದಿಯಾಗಿದೆ.
Advertisement. Scroll to continue reading.

In this article:Bihar, Diksoochi news, diksoochi Tv, diksoochi udupi, Featured, purnia, teacher, women harassment

Click to comment