Connect with us

Hi, what are you looking for?

ರಾಜ್ಯ

2023ನೇ ಸಾಲಿನ ರಾಷ್ಟ್ರಪತಿ ಸೇವಾ ಪದಕ ಪ್ರಶಸ್ತಿ ಪ್ರಕಟ: ಕರ್ನಾಟಕದ 20 ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿ

1

ಬೆಂಗಳೂರು : ಗಣರಾಜ್ಯೋತ್ಸವದಂದು ಕೇಂದ್ರ ಗೃಹ ಇಲಾಖೆಯಿಂದ ನೀಡುವಂತ ರಾಷ್ಟ್ರಪತಿ ಸೇವಾ ಪದಕ, ವಿಶಿಷ್ಟ ಸೇವಾ ಪದಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಕರ್ನಾಟಕದ 20 ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿಯ ಗರಿಮೆ ಸಂದಿದೆ.

2023ನೇ ಸಾಲಿನ ಪ್ರೆಸಿಡೆಂಟ್ ಪೊಲೀಸ್ ಮೆಡಲ್ ಪಟ್ಟಿಯಲ್ಲಿ ಐಪಿಎಸ್ ಅಧಿಕಾರಿ, ಸಿಐಡಿಯ ಎಡಿಜಿಪಿ ಕೆ.ವಿ ಶರತ್ ಚಂದ್ರ ಅವರಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಪ್ರಶಸ್ತಿ ಸಂದಿದೆ.

ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕ ರಾಜ್ಯ ಗುಪ್ತ ವಾರ್ತೆಯ ಹೆಚ್ಚುವರಿ ನಿರ್ದೇಶಕರಾದಂತ ಐಪಿಎಸ್ ಅಧಿಕಾರಿ ಲಾಭುರಾಮ್ ಅವರಿಗೆ ಒಲಿದಿದೆ.

Advertisement. Scroll to continue reading.

2023ನೇ ಸಾಲಿನ ಗಣರಾಜ್ಯೋತ್ಸವ ರಾಷ್ಟ್ರಪತಿಯವರ ಶ್ಲಾಘನೀಯ ಪದಕ ಪ್ರಶಸ್ತಿಯು ಬೆಂಗಳೂರು ನಗರದ ಸಂಚಾರ ಮತ್ತು ಯೋಜನೆ ಪೊಲೀಸ್ ಇನ್ಸ್ ಪೆಕ್ಟರ್ ಮನೋಜ್ ಎನ್ ಹೋವಳೆ, ಬೆಂಗಳೂರಿನ ಕೆ ಎಸ್ ಆರ್ ಪಿ 3ನೇ ಪಡೆಯ ಸ್ಟೆ.ಆರ್ ಪಿಐ ಬಿ.ಟಿ ವರದರಾಜ, 4ನೇ ಪಡೆಯ ಟಿ.ಎ ನಾರಾಯಣ ರಾವ್, ಎಸ್ ಎಸ್ ವೆಂಕಟರಮಣ ಗೌಡ, 9ನೇ ಪಡೆಯ ಎಸ್ ಪಾಟೀಲ್, ಸಿಐಡಿ ಹೆಡ್ ಕಾನ್ಸ್ ಟೇಬಲ್ ಕೆ.ಪ್ರಸನ್ನ ಕುಮಾರ್ ಗೆ ಲಭಿಸಿದೆ.

ತುಮಕೂರು ಸಂಚಾರ ಪಶ್ಚಿಮ ಠಾಣೆಯ ಹೆಸ್ ಸಿ ಪ್ರಭಾಕರ ಹೆಚ್, ಬೆಂಗಳೂರಿನ ಎಸ್ ಸಿ ಅರ್ ಬಿ ಮಹಿಳಾ ಹೆಚ್.ಸಿ ಡಿ.ಸುಧಾ, ಸಿಟಿ ಕಂಟ್ರೋಲ್ ರೂಂ ಸಿಹೆಚ್ ಸಿ ಟಿ.ಆರ್ ರವಿಕುಮಾರ್ ಗೆ ಪ್ರಶಸ್ತಿ ದೊರೆತಿದೆ.

ಬೆಂಗಳೂರು ಪಿಆರ್ ಸಿ ಪ್ರಧಾನ ಕಚೇರಿಯ ಡಿವೈಎಸ್ಪಿ ಎಸ್ ನಾಗರಾಜು, ಕೆಎಲ್‌ಎ ಡಿವೈಎಸ್ಪಿ ಪಿ.ವೀರೇಂದ್ರ ಕುಮಾರ್, ಬೆಂಗಳೂರು, ಬಿ.ಪ್ರಮೋದ್ ಕುಮಾರ್, ಕಲಬುರ್ಗಿಯ ಕರ್ನಾಟಕ ಲೋಕಾಯುಕ್ತ ಡಿವೈಎಸ್ ಪಿ ಸಿದ್ದಲಿಂಗಪ್ಪ ಗೌಡ ಆರ್ ಪಾಟೀಲ್, ಬೆಂಗಳೂರಿನ ಎಸ್ ಟಿ ಎಫ್ ಎನ್ ಕ್ರೋಚ್ ಮಂಟ್ ಡಿವೈಎಸ್ ಪಿ ಸಿ.ವಿ ದೀಪಕ್, ಬೆಂಗಳೂರು ನಗರ ವಿಶೇಷ ವಿಭಾಗದ ಡಿವೈಎಸ್ಪಿ ವಿಜಯ್ ಹೆಚ್ ಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಬಿಎಸ್ ಮಂಜುನಾಖ್, ಅಶೋಕ ನಗರ ಸಂಚಾರ ಪೊಲೀಸ್ ಠಾಣೆಯ ರಾವ್ ಗಣೇಶ್ ಜನಾರ್ಧನ್ ಹಾಗೂ ದಾವಣಗೆರೆ ಸಂಚಾರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಆರ್ ಪಿ ಅನೀಲ್ ಅವರಿಗೆ 2023ನೇ ಸಾಲಿನ ಗಣರಾಜ್ಯೋತ್ಸವ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!