ನವದೆಹಲಿ : ಭಾರತದಲ್ಲಿ 74ನೇ ಗಣರಾಜ್ಯೋತ್ಸವ ಸಂಭ್ರಮ. ಇದೇ ವೇಳೆ ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತದ ವೈರಿ ರಾಷ್ಟ್ರ ಪಾಕಿಸ್ತಾನಕ್ಕೂ ಸಿಹಿ ಹಂಚಿ ಶುಭಾಶಯ ತಿಳಿಸಿದ ಘಟನೆ ನಡೆದಿದೆ.
ಹೌದು, ಗುರುವಾರ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ ಮತ್ತು ಪಾಕಿಸ್ತಾನ ರೇಂಜರ್‌ಗಳು ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ. ಈ ಸೌಹಾರ್ದಯುತ ವಾತಾವರಣಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೇ ಸಾಕ್ಷಿಯಾಗಿದ್ದಾರೆ.
ಹೌದು, ಗಣರಾಜ್ಯೋತ್ಸವ ಆಚರಣೆ ಬಳಿಕ ಜಮ್ಮು ಕಾಶ್ಮೀರದ ಗಡಿ ಭಾಗಕ್ಕೆ ತೆರಳಿದ ರಕ್ಷಣಾ ಸಚಿವರು ಆರ್‌ಎಸ್ ಪುರ ಪ್ರದೇಶದಲ್ಲಿ ಐಬಿಯ ಸಿಬ್ಬಂದಿ ಮತ್ತು ಪಾಕಿಸ್ತಾನ ಪಡೆಗಳೊಂದಿಗೆ ಅವರು ಸಿಹಿ ವಿನಿಮಯ ಮಾಡಿಕೊಂಡರು. ಸ್ವತಃ ಸಚಿವರೇ ಸಿಹಿ ಹಂಚಿದ್ದು, ಗಣರಾಜ್ಯೋತ್ಸವ ಬಗ್ಗೆ ಎಲ್ಲರಿಗೂ ಶುಭಾಷಯ ತಿಳಿಸಿದ್ದು, ಅದನ್ನು ರಾಜನಾಥ್ ಸಿಂಗ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
Advertisement. Scroll to continue reading.

In this article:Diksoochi news, diksoochi Tv, diksoochi udupi, India, Pakistan, Republic day

Click to comment