ದಿನಾಂಕ : ೨೭-೦೧-೨೩, ವಾರ : ಶುಕ್ರವಾರ, ತಿಥಿ: ಷಷ್ಠೀ, ನಕ್ಷತ್ರ: ರೇವತಿ
ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿ ಇಡುವುದು ಉತ್ತಮ. ಯಾರಿಂದಲೂ ಸಾಲ ಪಡೆಯದಿರಿ. ತಾಳ್ಮೆ, ಸಂಯಮ ಅಗತ್ಯ. ನಾಗಾರಾಧನೆ ಮಾಡಿ.
ಕೌಟುಂಬಿಕ ನೆಮ್ಮದಿ, ಶಾಂತಿ ಇರಲಿದೆ. ಪ್ರಯಾಣದಿಂದ ಲಾಭ. ಮೇಲಾಧಿಕಾರಿಗಳಿಂದ ಪ್ರಶಂಸೆ. ರಾಮನ ನೆನೆಯಿರಿ.

ಕುಟುಂಬದಲ್ಲಿ ಸಂತೋಷದ ವಾತಾವರಣ. ಪ್ರೀತಿಯ ವಿಚಾರದಲ್ಲಿ ಸಂತಸ. ಸಹೋದ್ಯೋಗಿಗಳೊಂದಿಗೆ ಸಾಮರಸ್ಯ. ದೇವಿಯ ನೆನೆಯಿರಿ.
ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸುವುದು ಅತೀ ಅಗತ್ಯ. ಮೇಲಾಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳಿ. ಕೆಲಸದ ವಿಚಾರದಲ್ಲಿ ಉದಾಸೀನತೆ ಬೇಡ. ಶಿವನ ಆರಾಧಿಸಿ.
ಇಂದು ಹೊಸ ಕೆಲಸ ಆರಂಭಿಸಲು ಸಕಾಲ. ಕೆಲಸದ ವಿಚಾರದಲ್ಲಿ ಚಿಂತೆ. ವ್ಯವಹಾರದಲ್ಲಿ ನಷ್ಟ ಅನುಭವಿಸುವಿರಿ. ವಿಷ್ಣುವನ್ನು ನೆನೆಯಿರಿ.
ದಾಂಪತ್ಯದಲ್ಲಿ ಸಾಮರಸ್ಯ ಇರಲಿದೆ. ದೊಡ್ಡ ವ್ಯವಹಾರ ನಡೆಸುವಿರಿ. ಗೆಲುವು ನಿಮ್ಮ ಕಡೆಗಿದೆ. ರಾಮನ ನೆನೆಯಿರಿ.

ಕ್ಲಿಷ್ಟಕರ ಕೆಲಸಗಳನ್ನು ನೀವು ಉತ್ತಮವಾಗಿ ನಿಭಾಯಿಸುವಿರಿ. ನಿಮ್ಮ ಮಾತು ಹೆಚ್ಚು ಪ್ರಭಾವ ಬೀರಲಿದೆ. ಹೊಸ ಆಲೋಚನೆಗಳು ಹುಟ್ಟಲಿವೆ. ಶಿವನ ಆರಾಧಿಸಿ.
ಮಕ್ಕಳಿಗೆ ವಿದ್ಯಾರ್ಜನೆಯಲ್ಲಿನ ತೊಡಕು ನಿವಾರಣೆಯಾಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಮನೋಲ್ಲಾಸ ಇರಲಿದೆ. ಮಂಜುನಾಥನ ನೆನೆಯಿರಿ.
ಆರೋಗ್ಯದ ಕಾಳಜಿ ಅಗತ್ಯ. ಅನಾರೋಗ್ಯ ಸಾಧ್ಯತೆ. ವ್ಯಾಪಾರದಲ್ಲಿ ಆದಾಯ ಹೆಚ್ಚಲಿದೆ. ಸಂಗಾತಿಯ ಬೆಂಬಲ. ಶನೈಶ್ಚರನ ನೆನೆಯಿರಿ.
ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವಿರಿ. ವ್ಯಾಪಾರದಲ್ಲಿ ಲಾಭ ಇರಲಿದೆ. ಇತರರಿಂದ ಹೆಚ್ಚು ನಿರೀಕ್ಷೆ ಬೇಡ. ರಾಯರ ಆರಾಧಿಸಿ.

ಅನಗತ್ಯ ಖರ್ಚು ಬೇಡ. ಹಣದ ವಿಚಾರದಲ್ಲಿ ದುರಾಸೆ ಬೇಡ. ಇಂದು ಕೆಲವು ಕಹಿ ಅನುಭವಿಸಬೇಕಾದೀತು. ಗಣಪನ ನೆನೆಯಿರಿ.
ಸಂಗಾತಿಯ ಸಲಹೆ ಪಾಲಿಸಿ. ಹೊಸ ಯೋಜನೆ ಜಾರಿಗೆ ತರಲು ಸಕಾಲ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಗುರುವ ನೆನೆಯಿರಿ.

