ಲಕ್ನೋ : 70 ವರ್ಷದ ವೃದ್ಧನೊಬ್ಬ ತನ್ನ ಸೊಸೆಯನ್ನೇ ಪ್ರೀತಿಸಿ ಮದುವೆಯಾಗಿರುವ ಘಟನೆ ಗೋರಖಪುರದ ಛಾಪಿಯಾ ಉಮಾರೋ ಗ್ರಾಮದಲ್ಲಿ ನಡೆದಿದೆ.
ಕೈಲಾಶ್ ಯಾದವ್ ಬರ್ಹಲ್ ಗಂಜ್ ಪೊಲೀಸ್ ಠಾಣೆಯಲ್ಲಿ ಚೌಕಿದಾರನಾಗಿ ಕೆಲಸ ಮಾಡುತ್ತಿದ್ದಾರೆ.
ಕಳೆದ 12 ವರ್ಷದ ಹಿಂದೆ ಕೈಲಾಶ್ ಯಾದವ್ ಅವರ ಪತ್ನಿ ಮೃತಪಟ್ಟಿದ್ದಾರೆ. ಹೀಗಾಗಿ ಆತ ಒಂಟಿಯಾಗಿ ಜೀವನವನ್ನು ನಡೆಸುತ್ತಿದ್ದರು.

ತನ್ನ ಮೂರನೇ ಮಗ ಪೂಜಾ(28) ಎಂಬ ಯುವತಿಯನ್ನು ಮದುವೆಯಾಗಿದ್ದ. ಆದರೆ ಆತ ಮೃತಪಟ್ಟಿದ್ದಾರೆ. ಇದಾದ ಬಳಿಕ ತನ್ನ ಸೊಸೆಯನ್ನು ಬೇರೆ ಮದುವೆ ಮಾಡಿಕೊಟ್ಟಿದ್ದಾರೆ ಕೈಲಾಶ್. ಹೀಗಾಗಿ ಕೈಲಾಶ್ ತಾವು ಒಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದರು.
ಆದರೆ ಬೇರೆ ಮದುವೆಯಾದ ಕೆಲ ಸಮಯದ ಬಳಿಕ ಸೊಸೆ ಪೂಜಾಳಿಗೆ ಆ ಕುಟುಂಬ ಇಷ್ಟವಾಗದ ಕಾರಣಕ್ಕೆ, ಗಂಡನನ್ನು ಬಿಟ್ಟು ಮತ್ತೆ ಹಳೆ ಗಂಡನ ಮನೆಗೆ ಬಂದು ವಾಸಿಸಲು ಆರಂಭಿಸಿದಳು. ಹೀಗೆ ದಿನಗಳು ಹೋಗುತ್ತಿದ್ದಂತೆ 70 ವರ್ಷದ ಕೈಲಾಶ್ ರಿಗೆ ತನ್ನ 28 ವರ್ಷದ ಸೊಸೆಯ ಮೇಲೆ ಪ್ರೀತಿ ಹುಟ್ಟಿದೆ ಎನ್ನಲಾಗಿದೆ.
ಹೀಗಾಗಿ ಇತ್ತೀಚಿಗೆ ಇತ್ತೀಚೆಗೆ ದೇವಸ್ಥಾನದಲ್ಲಿ ಇಬ್ಬರೂ ಮದುವೆಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆಯ ಫೋಟೋಗಳು ವೈರಲ್ ಆಗುತ್ತಿದೆ.
