ಬೆಂಗಳೂರು : ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಅನುಕರಣೀಯ ಕೊಡುಗೆಗಾಗಿ ಪ್ರತಿಷ್ಠಿತ ಶ್ರೀ ಶ್ರೀ ಪ್ರಶಸ್ತಿ 2023 ನ್ನು ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಟ್ರಸ್ಟ್‌ನ ವತಿಯಿಂದ ಶನಿವಾರ ಪ್ರದಾನ ಮಾಡಲಾಯಿತು.
ಇದೇ ಮೊದಲನೆಯ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ- ಶೈಕ್ಷಣಿಕ ಉನ್ನತಿಗಾಗಿ, ವಿದ್ಯಾಸಂಸ್ಥೆಗಳಿಗೆ ಹಾಗೂ ಶಿಕ್ಷಕರಿಗೆ ಪ್ರಶಸ್ತಿಗಳನ್ನು ನೀಡುತ್ತಿರುವುದು.
ಜಾಗತಿಕ ಆಧ್ಯಾತ್ಮಿಕ ಗುರು ಮತ್ತು ಮಾನವತಾವಾದಿ ಪೂಜ್ಯ ಗುರುದೇವ ಶ್ರೀ ಶ್ರೀ ರವಿಶಂಕರ್ ರವರ ಉಪಸ್ಥಿತಿಯಲ್ಲಿ ಇವರ ಆಶೀರ್ವಚನದೊಂದಿಗೆ ಈ ಪ್ರಶಸ್ತಿ ಪ್ರದಾನ ಸಮಾರಂಭವು ನೆರವೇರಿಸಲ್ಪಟ್ಟಿತು.
ಈ ಸಂದರ್ಭ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಇಂದಿನ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿರುವ ಶಿಕ್ಷಕ ವರ್ಗವನ್ನು ಗುರುತಿಸಿ ಪುರಸ್ಕರಿಸುತ್ತಿರುವುದು ನನಗೆ ಅತ್ಯಂತ ಹರ್ಷದಾಯಕವಾಗಿರುವ ಕ್ಷಣವಾಗಿದೆ. ನಾವು ರಾಷ್ಟ್ರೀಯ ಮಟ್ಟದಲ್ಲಿ ಈ ಹೊಸ ಶೈಕ್ಷಣಿಕ ಪದ್ಧತಿಯನ್ನು ಜಾರಿಗೊಳಿಸುವ ಹಂತದಲ್ಲಿರುವಾಗಲೇ ಪೂಜ್ಯ ಗುರುದೇವರು ತಮ್ಮ ಶಾಲೆಗಳಲ್ಲಿ ಇದನ್ನು ಅಳವಡಿಸಿದ್ದಾರೆ .ಸ್ವಾಮಿ ವಿವೇಕಾನಂದರ ನುಡಿಗಳಂತೆ- ವಿದ್ಯಾಭ್ಯಾಸದ ಉದ್ದೇಶವು ಭಾರತೀಯ ಸಂಸ್ಕೃತಿಯನ್ನು ಉನ್ನತ ಮಟ್ಟಕ್ಕೆ ಏರಿಸಿ ಬೆಳೆಸುವುದಾಗಿದೆ. ಪೂಜ್ಯ ಗುರುದೇವರು ,ಗುಡ್ಡಗಾಡು ಪ್ರದೇಶಗಳಲ್ಲಿ ಈಗಾಗಲೇ ಶಾಲೆಗಳ ನಿರ್ಮಾಣವನ್ನು ಮಾಡಿ ಸ್ವಾಮಿ ವಿವೇಕಾನಂದರ ನುಡಿಗಳಂತೆ ವಿದ್ಯಾಭ್ಯಾಸ ಕ್ರಮವನ್ನು ಅಳವಡಿಸುವಲ್ಲಿ ನಮಗೆ ಮಾರ್ಗದರ್ಶನವನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ಸರಕಾರವು ಇನ್ನೂ ಕಾರ್ಯಪ್ರವೃತ್ತವಾಗಬೇಕಾಗಿದೆ
ಎಂದರು.
ಡಾ. ರಾಜಕುಮಾರ್ ರಂಜನ್ ಸಿಂಗ್-MoS(ಶಿಕ್ಷಣ), ಸಚಿವ ಅಶ್ವತ್ ನಾರಾಯಣ್,ಡ್ರೇಪರ್ ಅಸೋಸಿಯೇಟ್ ಸಂಸ್ಥಾಪಕ ಟಿಮ್ ಡ್ರೇಪರ್ ಉಪಸ್ಥಿತರಿದ್ದರು.
ಪ್ರತಿಷ್ಠಿತ ಶ್ರೀ ಶ್ರೀ ಪ್ರಶಸ್ತಿಯನ್ನು ಪಡೆದುಕೊಂಡವರು :

*ಆರ್ಮಿ ಪಬ್ಲಿಕ್ ಸ್ಕೂಲ್, ಶಂಕರ್ ವಿಹಾರ್, ದೆಹಲಿ ಕಂಟೋನ್ಮೆಂಟ್
*ದಿ ಹೆರಿಟೇಜ್ ಸ್ಕೂಲ್, ಕಲ್ಕತ್ತಾ.
ವಿಶೇಷ ಉಲ್ಲೇಖ–
*ಅಮಿತಿ ಇಂಟರ್ನ್ಯಾಷನಲ್ ಸ್ಕೂಲ್, ಗುರುಗ್ರಾಮ್.
ದೆಹಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು ಉತ್ತರ

ಮೌಂಟ್ ಅಬು ಪಬ್ಲಿಕ್ ಸ್ಕೂಲ್ ರೋಹಿಣಿ, ನವದೆಹಲಿ.
ಸಮಗ್ರ ಶಿಕ್ಷಣಕ್ಕಾಗಿ ಶ್ರೀ ಶ್ರೀ ಪ್ರಶಸ್ತಿ
ಶ್ರೀಮತಿ ಸುಲೋಚನಾ ದೇವಿ ಸಿಂಘಾನಿಯಾ ಶಾಲೆ, ಥಾಣೆ
ಮೇಯೋ ಕಾಲೇಜು ,ಅಜ್ಮೀರ್
ಪೂರ್ವ ವಲಯದ ಅತ್ಯುತ್ತಮ ಶಿಕ್ಷಕರಿಗೆ ಶ್ರೀಶ್ರೀ ಪ್ರಶಸ್ತಿಗಳು

ಜಮ್ಶೆಡ್ಪುರದ ವಿದ್ಯಾಭಾರತಿ ಚಿನ್ಮಯ ವಿದ್ಯಾಲಯದಿಂದ ಶ್ರೀಮತಿ ಸಹನಾ.
ಉತ್ತರ ವಲಯದ ಅತ್ಯುತ್ತಮ ಶಿಕ್ಷಕರಿಗೆ ಶ್ರೀ ಶ್ರೀ ಪ್ರಶಸ್ತಿಗಳು–
KIIT ವರ್ಲ್ಡ್ ಗುರ್ಗಾಮ್ ನಿಂದ ಶ್ರೀಮತಿ ಪ್ರಿಯಾಂಕ ಯಾದವ್
ದಕ್ಷಿಣ ವಲಯದಿಂದ ಉತ್ತಮ ಶಿಕ್ಷಕರಿಗೆ ಶ್ರೀ ಶ್ರೀ ಪ್ರಶಸ್ತಿಗಳು
ಡಾಕ್ಟರ್ ಗೀತಾ ಲಕ್ಷ್ಮಣ್ ಸಿಂಧಿ ಶಾಲೆ, ಹೆಬ್ಬಾಳ, ಬೆಂಗಳೂರು.
ಪಶ್ಚಿಮ ವಲಯದ ಅತ್ಯುತ್ತಮ ಶಿಕ್ಷಕರಿಗೆ ಶ್ರೀ ಶ್ರೀ ಪ್ರಶಸ್ತಿಗಳು :
ಸುನೀತಾ ಚಂದ್ ,ಡಿಎ ವಿ ಪಬ್ಲಿಕ್ ಸ್ಕೂಲ್ ,ಐರೋಲಿ, ನವಿ ಮುಂಬೈ.
ವಿಶೇಷ ಉಲ್ಲೇಖ
ಅಡ್ವಕೇಟ್ ರಾಜೇಂದರ್ ಅಪ್ಪಾ ಸಾಹೇಬ್, ಕೋಲಿ ಸರ್ಕಾರಿ ಪ್ರಾಥಮಿಕ ಶಾಲೆ, ಮಂಗಳವೇಧ ಜಿಲ್ಲೆ ,ಶೋಲಾಪುರ.
ಮಾನವೀಯ ಮೌಲ್ಯಗಳ ಶಿಕ್ಷಣಕ್ಕೆ ಅತ್ಯುತ್ತಮ ಕೊಡುಗೆ
ಪೋಲಾ ಭಾಸ್ಕರ್ ಕಾಲೇಜು ಶಿಕ್ಷಣದ ಕಮಿಷನರ್ ಕಾರ್ಯದರ್ಶಿ,GAD( ಸೇವೆಗಳು ಮತ್ತು HRM)

https://drive.google.com/drive/folders/1HrpT0OzpoGOZiqev4zZ613gohwFx2MVq
