ಹಿರಿಯಡಕ : ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡ್ಕದಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಉಪನ್ಯಾಸಕರುಗಳಿಗೆ, ಪ್ರಾಂಶುಪಾಲರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಪ್ರಾಂಶುಪಾಲೆ ಡಾ. ನಿಕೇತನ, ದೈಹಿಕ ಶಿಕ್ಷಕಿ ಸವಿತಾ, ಉಪನ್ಯಾಸಕ ವಿಶ್ವೇಶ್ವರ ಗಾವಂಕರ್ ಅವರನ್ನು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಇಂದು ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಡಾ. ಪಾದೆಕಲ್ಲು ವಿಷ್ಣುಭಟ್, ಸಭಾಧ್ಯಕ್ಷರಾಗಿ ಪ್ರಸ್ತುತ ಪ್ರಾಂಶುಪಾಲೆ ಡಾ. ಸೀಮಾ ಜಿ. ಕೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ ನಾಯ್ಕ್, ಕಾಲೇಜು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪವನ್ ಶೆಟ್ಟಿ, ಗೌರವಾಧ್ಯಕ್ಷ ಅಶೋಕ್ ಆಚಾರ್ಯ, ಶ್ರೀಪತಿ, ನಿಶ್ಮಿತಾ, ಅಶೋಕ್ ಶಿವಾನಂದ್, ಪ್ರಶಾಂತ್, ಸುಶಾಂತ್, ದಿನೇಶ್ ಉಪಸ್ಥಿತರಿದ್ದರು.
Advertisement. Scroll to continue reading.

ಸಂದೇಶ್ ಟಿವಿ ಪೆರ್ಡೂರು ಕಾರ್ಯಕ್ರಮ ನಿರೂಪಿಸಿದರು.
In this article:Diksoochi news, diksoochi Tv, diksoochi udupi, first grade college hiriadka, Nikethana, Padekallu Vishnu Bhat

Click to comment