ಶ್ರೀನಗರ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಇಂದಿಗೆ ಮುಗಿಯುತ್ತಿದೆ. ಇದರ ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಹೋದರಿ ಪ್ರಿಯಾಂಕಾ ಗಾಂಧಿ ಜೊತೆ ಸ್ನೋಬಾಲ್ ಆಟವಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇದರ ವೀಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹ್ಯಾಪಿ ಸ್ನೋ ಶ್ರೀನಗರದ ಕೊನೆಯ ಮುಂಜಾನೆ ಎಂದು ಬರದುಕೊಂಡಿದ್ದಾರೆ. ಈ ವೀಡಿಯೋದಲ್ಲಿ ಇಬ್ಬರೂ ಲಲ ಪರಸ್ಪರ ಮಂಜುಗಡ್ಡೆ ಎಸೆಯುವುದನ್ನು ಕಾಣಬಹುದು. ರಾಹುಲ್ ಗಾಂಧಿ ಮಂಜುಗಟ್ಟೆಯನ್ನ ಬಚ್ಚಿಕೊಂಡು ಬಂದು ತನ್ನ ತಂಗಿ ತಲೆ ಮೇಲೆ ಹಾಕುತ್ತಾರೆ. ನಂತರ ರಾಹುಲ್ ಗಾಂಧಿಗೆ ಪ್ರಿಯಾಂಕಾ ಗಾಂಧಿ ಬೆನ್ನಿನ ಹಿಂದೆ ಬಂದು ಮಂಜು ಎಸೆಯುತ್ತಾರೆ. ಈ ಮೂಲಕ ಅಣ್ಣ – ತಂಗಿ ಫುಲ್ ಎಂಜಾಯ್ ಮಾಡಿದ್ದಾರೆ.
Advertisement. Scroll to continue reading.

In this article:

Click to comment