ಉಡುಪಿ : ಪೇಟಿಎಂ ಫಾಸ್ಟ್ ಟ್ಯಾಗ್ ಸರಿಪಡಿಸುವೆನೆಂದು 99 ಸಾವಿರ ರೂ. ವಂಚಸಿರುವ ಘಟನೆ ಉಡುಪಿಯಲ್ಲಿ ಭಾನುವಾರ(ಜ.29) ನಡೆದಿದೆ.
ಫ್ರಾನ್ಸಿಸ್ ಪಿಯುಸ್ ಪುಟಾರ್ಡೋ ವಂಚನೆಗೊಳಗಾದವರು. ಅವರು ತಮ್ಮ ಪೆಟಿಎಮ್ ಪಾಸ್ಟ್ ಟ್ಯಾಗ್ ನಿಷ್ಕ್ರೀಯಾಗೊಂಡ ಬಗ್ಗೆ ಗೂಗಲ್ ನಲ್ಲಿ ಪೆ.ಟಿ.ಎಂ. ಫಾಸ್ಟ್ ಟ್ಯಾಗ್ ಎಪ್ಲಿಕೇಶನ್ ನ್ನು ಹುಡುಕಿದ್ದಾರೆ. ಗೂಗಲ್ ನಲ್ಲಿ ಪೆ.ಟಿ.ಎಂ. ಹೆಲ್ಪ್ & ಸಪೋರ್ಟ್ ನಲ್ಲಿ ಕಂಡುಬಂದ ಮೊಬೈಲ್ ನಂಬರ್ +918249255475 ಕ್ಕೆ ಕರೆ ಮಾಡಿದ್ದಾರೆ. ಆ ವ್ಯಕ್ತಿ ತಾನು ಪೆ.ಟಿ.ಎಂ. ಫಾಸ್ಟ್ ಟ್ರಾಗ್ ವೆಬ್‌ಸೈಟ್ ನ ಅಧಿಕಾರಿಯಾಗಿ ಎಂಬುದಾಗಿ ಪುಟಾರ್ಡೋ ಅವರನ್ನು ನಂಬಿಸಿ, ಪೆಟಿಎಮ್ ಪಾಸ್ಟ್ ಟ್ಯಾಗ್ ಸರಿಪಡಿಸಿ ಕೊಡುವುದಾಗಿ ಮೊಬೈಲ್ ಗೆ ಬಂದ ಓ.ಟಿ.ಪಿ ಪಡೆದಿದ್ದಾರೆ.
ಫ್ರಾನ್ಸಿಸ್ ಪಿಯುಸ್ ಪುಟಾರ್ಡೋ ಅವರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಸ್.ಬಿ ಖಾತೆ ಯಿಂದ ರೂ.49,000/-, ರೂ.19,999/-, ರೂ.19998, ರೂ.9,999/-, ರೂ.1,000/- ರಂತೆ ಒಟ್ಟು ರೂ.99,997/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 13/2023 ಕಲಂ: 66(C), 66(D)ಐ.ಟಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ.
