ನವದೆಹಲಿ : ಜನವರಿ 21 ರಂದು ನರ್ವಾಲ್‌ನಲ್ಲಿ ನಡೆದ ಅವಳಿ ಸ್ಫೋಟಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಶಾಲಾ ಶಿಕ್ಷಕ ಮತ್ತು ಲಷ್ಕರ್-ಎ-ತೊಯ್ಬಾ-ಭಯೋತ್ಪಾದಕನನ್ನು ಬಂಧಿಸಲಾಗಿದೆ. ಉಗ್ರನಿಂದ ಸುಗಂಧ ದ್ರವ್ಯ ಸುಧಾರಿತ ಸ್ಫೋಟಕ ಸಾಧನವನ್ನು (IED) ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಗುರುವಾರ ಮಾಹಿತಿ ನೀಡಿದ್ದಾರೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಈ ರೀತಿಯ ‘ಸುಗಂಧ ದ್ರವ್ಯ’ ಬಾಂಬ್ ಪತ್ತೆಯಾಗಿರುವುದು ಇದೇ ಮೊದಲು ಎಂದು ಡಿಜಿಪಿ ತಿಳಿಸಿದ್ದಾರೆ.
ಜನವರಿ 20 ರಂದು ಎರಡು ಬಾಂಬ್‌ಗಳನ್ನು ಇರಿಸಲಾಗಿದೆ ಮತ್ತು ಜನವರಿ 21 ರಂದು ಎರಡು ಸ್ಫೋಟಗಳು ಸಂಭವಿಸಿವೆ. ಮೊದಲ ಐಇಡಿ ಸ್ಫೋಟಗೊಂಡ ನಂತರ ಒಂಬತ್ತು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ನಾವು ಸುಗಂಧ ದ್ರವ್ಯ ಐಇಡಿಯನ್ನು ವಶಪಡಿಸಿಕೊಂಡಿದ್ದೇವೆ. ನಾವು ಈ ಮೊದಲು ಯಾವುದೇ ಸುಗಂಧ ದ್ರವ್ಯ ಐಇಡಿಯನ್ನು ವಶಪಡಿಸಿಕೊಂಡಿಲ್ಲ. ಯಾರಾದರೂ ಅದನ್ನು ಒತ್ತಲು ಅಥವಾ ತೆರೆಯಲು ಪ್ರಯತ್ನಿಸಿದರೆ ಐಇಡಿ ಸ್ಫೋಟಗೊಳ್ಳುತ್ತದೆ. ನಮ್ಮ ವಿಶೇಷ ತಂಡವು ಆ ಐಇಡಿಯನ್ನು ನಿರ್ವಹಿಸುತ್ತದೆ ಎಂದು ಡಿಜಿಪಿ ಹೇಳಿದ್ದಾರೆ.
ರಿಯಾಸಿ ಜಿಲ್ಲೆಯ ನಿವಾಸಿಯಾದ ಆರಿಫ್ ಮೂರು ವರ್ಷಗಳಿಂದ ಪಾಕಿಸ್ತಾನದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ವೈಷ್ಣೋದೇವಿ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಬಾಂಬ್ ದಾಳಿ ನಡೆಸಿ ನಾಲ್ಕು ಜನರನ್ನ ಕೊಂದು 24 ಜನರನ್ನು ಗಾಯಗೊಳಿಸಿರುವುದಾಗಿ ಆರಿಫ್ ಒಪ್ಪಿಕೊಂಡಿದ್ದಾನೆ ಎಂದು ಸಿಂಗ್ ಹೇಳಿದರು.
ಡಿಸೆಂಬರ್ ಅಂತ್ಯದ ವೇಳೆಗೆ ಆರೋಪಿಗಳಿಗೆ ಮೂರು ಐಇಡಿಗಳು ಪೂರೈಕೆಯಾಗಿವೆ. ಅವರು ಮರ್ವಾಲ್ ಪ್ರದೇಶದಲ್ಲಿ ಎರಡು ಐಇಡಿಗಳನ್ನ ಬಳಸಿದರು. ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿರುವ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಖಾಸಿಂನ ಪ್ರಭಾವದಲ್ಲಿ ಕೆಲಸ ಮಾಡುತ್ತಿದ್ದಾನೆ. ಈ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ಚಟುವಟಿಕೆಗಳಿಗೆ ಅವನು ಜವಾಬ್ದಾರನಾಗಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.

Two bombs were planted on 20th Jan. Two blasts occurred on 21st Jan at a gap of 20 minutes to kill as many people as possible. 9 people were injured after first IED blast. Police have arrested one terrorist Arif, who was in contact with Pakistan handlers for 3 years: J&K DGP pic.twitter.com/J58wzC3OJj— ANI (@ANI) February 2, 2023
