ಆಗ್ನೇಯ ಟರ್ಕಿಯಲ್ಲಿ ಇಂದು ಮುಂಜಾನೆ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ ಟರ್ಕಿಯಲ್ಲಿ ಕನಿಷ್ಠ 53 ಜನರು ಸಾವನ್ನಪ್ಪಿದರೆ, ನೆರೆಯ ಸಿರಿಯಾದಲ್ಲಿ 42 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಭೂಕಂಪದಿಂದಾಗಿ ಅನೇಕ ಕಟ್ಟಡಗಳು ನಾಶವಾಗಿವೆ. ಇದರಿಂದ ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಒಸ್ಮಾನಿಯೆ ಪ್ರಾಂತ್ಯದಲ್ಲಿ ಐದು ಜನರು ಮತ್ತು ಸಿರಿಯಾದೊಂದಿಗೆ ಟರ್ಕಿಯ ಗಡಿಯ ಸಮೀಪವಿರುವ ಸ್ಯಾನ್ಲಿಯುರ್ಫಾದಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ಪ್ರಾಂತ್ಯದಲ್ಲಿ 34 ಕಟ್ಟಡಗಳು ನಾಶವಾಗಿವೆ ಎಂದು ಗವರ್ನರ್ ಎರ್ಡಿಂಕ್ ಯಿಲ್ಮಾಜ್ ಹೇಳಿದ್ದರು. ಇದೀಗ ಸಾವಿನ ಸಂಖ್ಯೆ 90ಕ್ಕೆ ಏರಿಕೆಯಾಗಿದೆ.
ಭೂಕಂಪವು ಇಂದು ಮುಂಜಾನೆ 04:17 ಕ್ಕೆ ಮತ್ತು ಭೂಮಿಯಿಂದ ಸುಮಾರು 17.9 ಕಿಲೋಮೀಟರ್ ಆಳದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement. Scroll to continue reading.

In this article:Diksoochi news, diksoochi Tv, diksoochi udupi, earth quake, Featured, turkey

Click to comment