ಇಸ್ತಾಂಬುಲ್ : ಭೂಕಂಪದಿಂದ ಕಟ್ಟಡಗಳ ಅವಶೇಷಗಳಡಿ ಸಿಲುಕಿ ಟರ್ಕಿ ಫುಟ್ಬಾಲ್ ತಂಡದ ಪ್ರಮುಖ ಆಟಗಾರ ಮೃತಪಟ್ಟಿದ್ದಾನೆ.
ಟರ್ಕಿಯ ಫುಟ್ಬಾಲ್ ಕ್ಲಬ್ ಯೆನಿ ಮಾಲತ್ಯಸ್ಪೋರ್ ಪರವಾಗಿ ಆಡಿದ ಗೋಲ್ ಕೀಪರ್ ಅಹ್ಮತ್ ಐಯುಪ್ ಟರ್ಕಸ್ಲಾನ್ (28) ನೆಲಸಮವಾದ ಕಟ್ಟಡಗಳಡಿ ಸಿಲುಕಿ, ಮೃತಪಟ್ಟಿದ್ದಾರೆ. ಅವರ ಸಾವಿಗೆ ಫುಟ್ಬಾಲ್ ಲೋಕ ಕಂಬನಿ ಮಿಡಿದಿದೆ.
ಆಹ್ಮತ್ ಸಾವಿನ ಸುದ್ದಿಯನ್ನು ಫುಟ್ಬಾಲ್ ಕ್ಲಬ್ ಯೆನಿ ಮಾಲತ್ಯಸ್ಪೋರ್ ತಂಡ ಟ್ವೀಟ್ ಮಾಡಿ ಅಧಿಕೃತವಾಗಿ ತಿಳಿಸಿದ್ದಾರೆ.
Advertisement. Scroll to continue reading.

“ನಮ್ಮ ಗೋಲ್‌ಕೀಪರ್, ಅಹ್ಮತ್ ಐಯುಪ್ ಟರ್ಕಸ್ಲಾನ್, ಭೂಕಂಪದ ಕುಸಿತದ ನಂತರ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾರೆ. ರೆಸ್ಟ್ ಇನ್ ಪೀಸ್, “ನಾವು ನಿಮ್ಮನ್ನು ಮರೆಯುವುದಿಲ್ಲ, ನೀವೊಬ್ಬ ಅದ್ಭುತ ವ್ಯಕ್ತಿ.” ಎಂದು ಬರೆದು ಕೊಂಡಿದೆ.