ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತಲಿರುತ್ತವೆ. ಇದೀಗಅಚ್ಚರಿಯನ್ನುಂಟು ಮಾಡುವ ವೀಡಿಯೋ ಒಂದು ವೈರಲ್ ಆಗುತ್ತಿದೆ.
ಸುಮಾರು 60 ವರ್ಷದ ವೃದ್ಧೆ ಸೀರೆ ಧರಿಸಿ ಅಪಾಯಕಾರಿ ಸಾಹಸ ಮಾಡಿರೋ ವೀಡಿಯೋ ಇದು. ನೀವೂ ವಿಡಿಯೋ ನೋಡಿದ್ರೆ ಒಮ್ಮೆ ಆಶ್ಚರ್ಯಕ್ಕೊಳಗಾಗುವುದಂತೂ ಖಂಡಿತಾ.
ಈ ವೀಡಿಯೋದಲ್ಲಿ ಕೆಲವು ಮಕ್ಕಳು ನದಿಯ ದಡದಲ್ಲಿ ಸ್ನಾನ ಮಾಡುತ್ತಿರುವುದನ್ನು ಕಾಣಬಹುದು. ಇದರ ನಡುವೆ 60 ವರ್ಷದ ಅಜ್ಜಿಯೋರ್ವರು ಸೇತುವೆ ಮೇಲಿಂದ ನದಿಗೆ ಹಾರುತ್ತಾರೆ. ಕೇಲವ ಒಮ್ಮೆ ಮಾತ್ರವಲ್ಲದೆ ಎರಡನೇ ಬಾರಿಗೆ ಸೇತುವೆ ಮೇಲಿಂದ ನದಿಗೆ ಹಾಕುತ್ತಾರೆ. ಇದು ಎಲ್ಲರನ್ನೂ ಒಮ್ಮೆ ಅಚ್ಚರಿಗೊಳಿಸುತ್ತದೆ.
ವಿಡಿಯೋವನ್ನು ಟ್ವಿಟರ್ ಬಳಕೆದಾರರಾದ ಸುಪ್ರಿಯಾ ಸಾಹು IAS ಎಂಬುವವರು ಹಂಚಿಕೊಂಡಿದ್ದು, ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ನೆಟ್ಟಿಗರು ಅಜ್ಜಿಯ ಸಾಹಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Advertisement. Scroll to continue reading.
