ಜಿಂಕೆಯೊಂದು ಕಡೇ ಕ್ಷಣದಲ್ಲಿ ಜೀವ ಉಳಿಸಿಕೊಂಡ ರೋಚಕ ದೃಶ್ಯ ವೈರಲ್ ಆಗಿದ್ದು, ವೀಕ್ಷಕರಿಗಂತೂ ಅಬ್ಬಾ! ಎಂದೆನಿಸುವಂತೆ ಮಾಡಿದೆ. ಜಿಂಕೆ ನೀರಿನಲ್ಲಿ ಸಾಗುತ್ತಲೇ ತನ್ನ ಜೀವ ಉಳಿಸಿಕೊಂಡಿದೆ. ಚಿತ್ರ ನಿರ್ಮಾಪಕ ವಿನೋದ್ ಕಪ್ರಿ ಈ ರೋಚಕ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜಿಂಕೆ ಜೀವ ಉಳಿಸಿಕೊಳ್ಳಲು ಸಾಧ್ಯವಾದಷ್ಟು ಬೇಗ ಈಜುತ್ತಿತ್ತು. ಮೊಸಳೆ ಕೂಡಾ ಅಷ್ಟೇ ವೇಗದಲ್ಲಿ ಹಿಂಬಾಲಿಸಿಕೊಂಡು ಬರುತ್ತಿತ್ತು. ಈ ದೃಶ್ಯವನ್ನು ನೋಡುವಾಗಲೇ ಮುಂದೇನಾಗುತ್ತೋ ಏನೋ' ಎಂಬಂತಹ ಆತಂಕ ಶುರುವಾಗುತ್ತದೆ. ಇನ್ನೇನು ಮೊಸಳೆ ಗಬ್ಬಕ್ಕನೇ ಜಿಂಕೆಯ ಮೇಲೆ ಬಾಯಿ ಹಾಕಿ ನೀರಿನೊಳಗೆ ತಳ್ಳಿತ್ತು ಎನ್ನುವಷ್ಟರಲ್ಲಿ ಜಿಂಕೆ ಚಂಗನೆ ನೆಗೆದು ಮೊಸಳೆಯ ಬಾಯಿಯಿಂದ ತಪ್ಪಿಸಿಕೊಂಡು ವೇಗದಲ್ಲಿ ದಡ ಸೇರುತ್ತದೆ. ಈ ದೃಶ್ಯವನ್ನು ಬೋಟಿನಲ್ಲಿ ಪ್ರಯಣಿಸುತ್ತಿದ್ದವರು ಸೆರೆ ಹಿಡಿದಿದ್ದಾರೆ.
ಒಂದು ಅದ್ಭುತವಾದ ಕ್ಲೈಮ್ಯಾಕ್ಸ್’ ಎಂಬ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಸದ್ಯ ವೈರಲ್ ಆಗುತ್ತಿದೆ.
Advertisement. Scroll to continue reading.
