ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ಸಾವನ್ನಪ್ಪಿದೆ.
ದಾವಣಗೆರೆ : ಆನಗೋಡು ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಚಿರತೆಯೊಂದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಡರಾತ್ರಿ ಚಿರತೆ ರಸ್ತೆ ದಾಟುವಾಗ ಅವಘಡ ಸಂಭವಿಸಿರಬೇಕು ಎನ್ನಲಾಗಿದೆ.
ಆನಗೋಡು ಸುತ್ತಾಮುತ್ತ ಓಡಾಡುತ್ತಿದ್ದ ಚಿರತೆ ಇದೆ ಎನ್ನಲಾಗುತ್ತಿತ್ತು. ಚಿರತೆಗಳು ತಡರಾತ್ರಿ ಬೇಟೆ ಹುಡುಕಿಕೊಂಡು ರಸ್ತೆ ಸುತ್ತಮುತ್ತ ನಾಯಿಗಳನ್ನು ಹೊತ್ತೊಯ್ಯವುದು ಇತ್ತೀಚೆಗೆ ಸಾಮಾನ್ಯವಾಗಿದೆ.
Advertisement. Scroll to continue reading.

ಈ ವೇಳೆ ವಾಹನ ಚಿರತೆಗೆ ಡಿಕ್ಕಿ ಹೊಡೆದಿರಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.
Advertisement. Scroll to continue reading.

In this article:davangere, death, Diksoochi news, diksoochi Tv, diksoochi udupi, leopard, ಚಿರತೆ ಸಾವು

Click to comment